ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಈಶಾನ್ಯ ಮಾನ್ಸೂನ್ ತೀವ್ರಗೊಂಡಿದೆ. ಭಾರೀ (Rain) ಮಳೆಯ ಹಿನ್ನೆಲೆ ರಾಜ್ಯದ ಕೊಯಮತ್ತೂರು, ತಿರುಪ್ಪೂರ್, ಮಧುರೈ, ಥೇಣಿ, ದಿನಿಡಿಗಲ್ ಸೇರಿದಂತೆ 5 ಜಿಲ್ಲೆಗಳಲ್ಲಿ ಹಾಗೂ ನೀಲಗಿರಿಯ ಕೆಲವು ತಾಲೂಕುಗಳಲ್ಲಿ ಗುರುವಾರ ಶಾಲೆಗಳಿಗೆ (School) ರಜೆ ಘೋಷಿಸಲಾಗಿದೆ.
ಭಾರೀ ಮಳೆಯಿಂದಾಗಿ ಕಲ್ಲರ್ ಮತ್ತು ಅಡ್ಡೆರ್ಲಿ ನಡುವಿನ ಹಳಿಯ ಕೆಳಭಾಗದ ಮಣ್ಣು ಕೊಚ್ಚಿ ಹೋಗಿದೆ. ಈ ಹಿನ್ನೆಲೆ ನೀಲಗಿರಿ ಬೆಟ್ಟದ ರೈಲ್ವೆ ವಿಭಾಗದಲ್ಲಿ 2 ರೈಲುಗಳನ್ನು ರದ್ದುಗೊಳಿಸಲಾಗಿದೆ.
Advertisement
Advertisement
ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಭಾರತದ ದಕ್ಷಿಣ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಉಗ್ರನ ಬೇಟೆಯಾಡಿದ ಭಾರತೀಯ ಸೇನೆ
Advertisement
ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಕಣ್ಣೂರು ಜಿಲ್ಲೆಯಲ್ಲಿ ಬುಧವಾರ 7 ಸೆಂ.ಮೀ ಮಳೆ ದಾಖಲಾಗಿದೆ. ಐಎಂಡಿ ಪ್ರಕಾರ ಕೇರಳದಲ್ಲಿ ಮುಂದಿನ 2 ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ. ತಮಿಳುನಾಡಿನಲ್ಲೂ ಮುಂದಿನ 2 ದಿನ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
Advertisement
ತೆಲಂಗಾಣದಲ್ಲಿ ಗುರುವಾರ ಅಲ್ಲಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಮಾನ್ಸೂನ್ ಮಳೆಯ ಅಬ್ಬರಕ್ಕೆ ಅಧಿಕಾರಿಗಳು ಮುಂಜಾಗ್ರತೆ ವಹಿಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವಧಿಯ ಸಾಮೂಹಿಕ ವಿವಾಹಕ್ಕೆ ‘ಮಾಂಗಲ್ಯ ಭಾಗ್ಯ’ ಎಂದು ಮರುನಾಮಕರಣ