ಬೆಂಗಳೂರು: ಕಳೆದ ಎರಡು ದಿನಗಳಿಂದ ಸಂಜೆ ನಗರ ಸೇರಿದಂತೆ ರಾಜ್ಯದ ಹಲವೆಡೆ ವರುಣಾ ಅಬ್ಬರಿಸುತ್ತಿದ್ದಾನೆ. ಇಂದೂ ಕೂಡ ಮಧ್ಯಾಹ್ನದ ಬಳಿಕ ಮಳೆಯಾಗುವ ಸಾಧ್ಯತೆಗಳಿವೆ.
ಶುಕ್ರವಾರ ಸಂಜೆ ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್, ಜಾಲಹಳಿ, ನೆಲಮಂಗಲ ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದ ಸ್ಟೇಜ್‍ಗೆ ಹಾಕಲಾಗಿದ್ದ ತಗಡುಗಳು ಹಾರಿಹೋಗಿದ್ದು, ಪ್ಯಾಲೇಸ್ ಬಳಿ ಆಲದ ಮರವೊಂದು ನೆಲಕ್ಕುರುಳಿದೆ.
Advertisement
Advertisement
ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತವಾಗಿದ್ರಿಂದ ವಾಹನ ಸವಾರರು ತೀವ್ರ ಪ್ರಯಾಸಪಟ್ರು. ಚಿಕ್ಕೋಡಿಯ ಹಾರೂಗೇರಿಯಲ್ಲಿ ಆಲಿಕಲ್ಲು ಸಹಿತ ಭಾರೀ ಗಾಳಿ ಮಳೆಯಿಂದ 122ರ ಪಿಂಕ್ ಮತಗಟ್ಟೆ ಬ್ಯಾನರ್ ನಾಶವಾಗಿದೆ.
Advertisement
ಮಂಗಳೂರು, ಉಡುಪಿಯಲ್ಲೂ ಗಾಳಿ ಸಹಿತ ಭಾರೀ ಮಳೆಯಾಗಿದ್ರಿಂದ, ಜನ ಕತ್ತಲಲ್ಲಿ ಕಳೆಯಬೇಕಾಯ್ತು. ಮಂಡ್ಯ ತಾಲೂಕಿನಲ್ಲಿ ರಾತ್ರಿ ಮಳೆಯಾಗಿದ್ದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹಾಗಾಗಿ ಇಂದು ಚಿಕ್ಕ ಮಂಡ್ಯ ಗ್ರಾಮದಲ್ಲಿ ಬೆಳಗ್ಗೆ ಅಧಿಕಾರಿಗಳು ಮೇಣದ ಬತ್ತಿ ಬೆಳಕಿನಲ್ಲಿ ಮತಯಂತ್ರಗಳನ್ನು ಸಿದ್ಧಪಡಿಸಿಕೊಂಡರು.