ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯ ಹಲವೆಡೆ ಮಳೆರಾಯ ಆರ್ಭಟಿಸಿದ್ದು, ಗುಡುಗು ಸಿಡಿಲು ಸಹಿತ ಭರ್ಜರಿ ಅಕಾಲಿಕ ಮಳೆಯಾಗಿದೆ. ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ಜಿಲ್ಲೆಯಾದ್ಯಂತ ಮಳೆಯಾಗಿದೆ.
ಕೊರೊನಾ ಭೀತಿಯಿಂದ ಲಾಕ್‍ಡೌನ್ ನಿಂದ ಸ್ಟೇ ಹೋಂ ಪಾಲಿಸುತ್ತಾ ಮನೆಯಲ್ಲಿಯೇ ಬಿಸಿಲಿನ ಝಳದಿಂದ ಕಂಗೆಟ್ಟು ಫ್ಯಾನ್, ಕೂಲರ್, ಎಸಿ ಮೊರೆ ಹೊಗಿದ್ದ ಸಾರ್ವಜನಿಕರು ಇದೀಗ ಕಿಟಕಿ, ಬಾಗಿಲು ತೆರೆದು ಮಳೆಯಿಂದ ತಂಪಿನ ಗಾಳಿಯ ಆಹ್ಲಾದ ಸವಿಯುತ್ತಿದ್ದಾರೆ.
Advertisement
Advertisement
ಇನ್ನೂ ಕೊರೊನಾ ಭೀತಿಯ ನಡುವೆಯೂ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಮಾಡ್ತಿದ್ದ ವಾಹನ ಸವಾರರಿಗೆ ಮಳೆರಾಯ ಸರಿಯಾದ ಏಟು ಕೊಟ್ಟಿದ್ದಾನೆ. ಹೆದ್ದಾರಿಯ ಅಕ್ಕಪಕ್ಕದಲ್ಲಿ ಸರಿಯಾಗಿ ನಿಲ್ಲಲು ಸ್ಥಳವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
Advertisement
ರಾಮನಗರ ಮಾತ್ರವಲ್ಲದೆ ರಾಜ್ಯದ ಹಲವೆಡೆ ಇಂದು ಸಂಜೆ ಮಳೆಯಾಗಿದ್ದು, ಜನ ಸಾಮಾನ್ಯರು ನಿಟ್ಟುಸಿರುಬಿಟ್ಟಿದ್ದಾರೆ.