ಭಾರೀ ಮಳೆಗೆ ಅವಾಂತರ ಸೃಷ್ಟಿ – ಕೋಟ್ಯಂತರ ರೂ. ಮೌಲ್ಯದ 30 ಎಕರೆ ದಾಳಿಂಬೆ ನಾಶ

Public TV
1 Min Read
Pomegranate loss

ರಾಯಚೂರು: ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಕೋಟ್ಯಂತರ ರೂಪಾಯಿ ಮೌಲ್ಯದ 30 ಎಕರೆ ದಾಳಿಂಬೆ ಬೆಳೆ ನಾಶವಾಗಿರುವ ಘಟನೆ ಸಿಂಧನೂರು (Sindhanuru) ತಾಲೂಕಿನಲ್ಲಿ ನಡೆದಿದೆ.

ಗೊಬ್ಬರಕಲ್, ಹುಡಾ, ಸಾಲಗುಂದ ಸೇರಿ ವಿವಿಧೆಡೆ ಸುರಿದ ಭಾರೀ ಮಳೆಗೆ ಮಲ್ಲಯ್ಯ ಸ್ವಾಮಿ, ಶಿವಲಿಂಗಯ್ಯಸ್ವಾಮಿ, ಹನುಮಂತರೆಡ್ಡಿ ಅವರಿಗೆ ಸೇರಿದ 30 ಎಕರೆ ದಾಳಿಂಬೆ ಬೆಳೆ ನಾಶವಾಗಿದೆ.ಇದನ್ನೂ ಓದಿ: ವಾಲ್ಮೀಕಿ ಸಮುದಾಯದ ದಯಾನಂದ್‌ ಮೇಲೆ ಏಕೆ ಸಿಎಂಗೆ ಕೋಪ – ಪ್ರತಾಪ್‌ ಸಿಂಹ ಪ್ರಶ್ನೆ

ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ದಾಳಿಂಬೆ ಬೆಳೆ ನೆಲಕ್ಕೆ ಬಿದ್ದು ಹಾಳಾಗಿದೆ. ಎಕರೆಗೆ 3 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ ದಾಳಿಂಬೆ ಕೆಲವೇ ಕೆಲವು ದಿನಗಳಲ್ಲಿ ಮಾರುಕಟ್ಟೆ ಸೇರಬೇಕಿತ್ತು. ಆದರೆ ಇದೀಗ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆ.ಜಿಗೆ 130 ರಿಂದ 160 ರೂ.ಯಂತೆ ಮಾರಾಟವಾಗುತ್ತಿದ್ದು, ಮಳೆ ಸೃಷ್ಟಿಸಿದ ಅವಾಂತರದಿಂದಾಗಿ ಎಲ್ಲವೂ ಮಣ್ಣುಪಾಲಾಗಿದೆ. ಕೋಟ್ಯಂತರ ರೂಪಾಯಿ ಬೆಳೆ ನಷ್ಟವಾಗಿದ್ದು, ಕೂಡಲೇ ಸರ್ಕಾರ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಸರ್ಕಾರಕ್ಕೂ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೂ ಸಂಬಂಧವಿಲ್ಲ- ಹೆಚ್.ಕೆ.ಪಾಟೀಲ್

Share This Article