ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಮಸ್ಕಿ ಜಲಾಶಯ ಭರ್ತಿಯಾಗಿದೆ. ಜಲಾನಯನ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿರುವುದರಿಂದ ಮಸ್ಕಿ ನಾಲಾ ಜಲಾಶಯದಿಂದ ನೀರು ಹೊರಬಿಡಲಾಗಿದೆ.
Advertisement
ಹಳ್ಳಕ್ಕೆ ಭಾರೀ ಪ್ರಮಾಣದ ನೀರು ಹರಿಸುವ ಸಾಧ್ಯತೆ ಹಿನ್ನೆಲೆ ಸುತ್ತಲಿನ ಗ್ರಾಮಸ್ಥರು ಪ್ರವಾಹದ ಭೀತಿಯಲ್ಲಿದ್ದಾರೆ. ಒಟ್ಟು ಮಸ್ಕಿ ಜಲಾಶಯದ ಮಟ್ಟ 472.12 ಮೀಟರ್ ಇದ್ದು, ಈಗ 471.80 ಮೀಟರ್ ನೀರು ಸಂಗ್ರಹವಿದೆ. ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಅಧಿಕಾರಿಗಳು ಮಸ್ಕಿ ಹಳ್ಳದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಹಳ್ಳದ ಬಳಿ ಸುಳಿಯದಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ನಿನ್ನೆ ರಾತ್ರಿ ರಹಸ್ಯ ಸಭೆ- ಇಂದು ದಿಢೀರ್ ದೆಹಲಿಗೆ ಹೊರಟ ಸಿಎಂ
Advertisement
Advertisement
ರಾಯಚೂರು, ಕೊಪ್ಪಳ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ಸಿಂಧನೂರು ತಾಲೂಕಿನ ಚಿರತನಾಳ ಹಳ್ಳ ತುಂಬಿ ಹರಿಯುತ್ತಿದೆ. ಹಳ್ಳ ತುಂಬಿ ಹರಿಯುತ್ತಿರುವುದರಿಂದ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ಗ್ರಾಮದ ಜನ ತುಂಬಿ ಹರಿಯುವ ಹಳ್ಳದಲ್ಲಿಯೇ ತಡೆಗೋಡೆಗೆ ಸಿಲುಕಿದ ಕಸಕಡ್ಡಿ ತೆಗೆದು ನೀರು ಮುಂದೆ ಸರಾಗವಾಗಿ ಹೋಗುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಸ್ತೆಮಾರ್ಗ ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬಿಪಿಎಲ್ ಇರಲಿ ಯಾವುದೇ ಕಾರ್ಡ್ ಇದ್ರೂ ಸರ್ಕಾರ ಪರಿಹಾರ ಕೊಡ್ಬೇಕು: ಸಿದ್ದರಾಮಯ್ಯ