ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸಹ ಮಳೆಯ ಆರ್ಭಟ ಮುಂದುವರಿದಿದೆ. ಬೆಳಗಿನಿಂದ ಕರಾವಳಿ ಭಾಗದಲ್ಲಿ ಅಲ್ಪ ಬಿಡುವು ಕೊಟ್ಟಿದ್ದ ಮಳೆ, ಮಧ್ಯಾಹ್ನದ ಹೊತ್ತಿಗೆ ತೀವ್ರತೆ ಹೆಚ್ಚಿಸಿಕೊಂಡಿದೆ.
Advertisement
ಕರಾವಳಿ ಭಾಗದ ಹೊನ್ನಾವರದಲ್ಲಿ ಕಳೆದ 24 ಘಂಟೆಯಲ್ಲಿ 90.3 ಮಿ.ಮೀ. ಮಳೆಯಾದರೆ, ಭಟ್ಕಳ 66, ಹಳಿಯಾಳ 9.0, ಮುಂಡಗೋಡು 9.2, ಜೋಯಿಡಾ 11.0, ಕಾರವಾರ 40.9, ಯಲ್ಲಾಪುರ 5.2, ಕುಮಟಾ 61.8, ಅಂಕೋಲಾದಲ್ಲಿ 44.6 ಮಿ.ಮೀ. ಮಳೆಯಾಗಿದೆ. ಇದನ್ನೂ ಓದಿ: ಜಮೀರ್ ಕೂಡ ಒಂಥರಾ ತಾಲಿಬಾನ್: ಸೊಗಡು ಶಿವಣ್ಣ
Advertisement
Advertisement
ಮಲೆನಾಡು ಭಾಗದ ಶಿರಸಿ, ಸಿದ್ದಾಪುರ ಹಾಗೂ ಘಟ್ಟ ಭಾಗದಲ್ಲೂ ಸಹ ಹೆಚ್ಚಿನ ಮಳೆಯಾಗುತ್ತಿದೆ. ಸಿದ್ದಾಪುರದಲ್ಲಿ 31.0, ಶಿರಸಿಯಲ್ಲಿ 27.5 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜಿಲ್ಲೆಯಾದ್ಯಂತ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.