ಮಡಿಕೇರಿ: ಕಳೆದೆರಡು ದಿನಗಳಿಂದ ಕೊಡಗು ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಮಧ್ಯಾಹ್ನ ಮತ್ತು ಸಂಜೆ ವೇಳೆ ತುಂತುರು ಮಳೆಯಾಗುತ್ತಿದೆ. ಬಿರು ಬಿಸಿಲಿನಿಂದ ಕಾವೇರಿದ್ದ ವಾತಾವರಣ ಕೊಂಚ ತಂಪಾಗಿದೆ.
Advertisement
ಇಂದು ಬೆಳಗ್ಗೆಯಿಂದ ಜಿಲ್ಲೆಯ ವಿವಿಧೆಡೆ ದಟ್ಟ ಮೋಡ ಕವಿದ ವಾತಾವರಣ ಇದೆಯಾದರೂ ಕೆಲ ಭಾಗದಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆದರೆ ಮಡಿಕೇರಿ ನಗರದಲ್ಲಿ ಮಧ್ಯಾಹ್ನದ ಬಳಿಕ ಮಳೆಯಾಗಿದೆ. ಅಲ್ಲದೆ ಮಡಿಕೇರಿ ತಾಲೂಕಿನ ಕಾಲೂರು, ಮುಕ್ಕೋಡ್ಲು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಳೆಯಾಗಿದ್ದರೆ, ಚೇರಂಬಾಣೆ, ಭಾಗಮಂಡಲ, ನಾಪೋಕ್ಲು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!
Advertisement
Advertisement
ಇದನ್ನು ಹೊರತುಪಡಿಸಿದರೆ ಬಹುತೇಕ ಕಡೆಗಳಲ್ಲಿ ಹನಿ ಮಳೆಯಷ್ಟೇ ಆಗಿದೆ. ಮೋಡ ಕವಿದ ವಾತಾವರಣ ಜಿಲ್ಲೆಯಾದ್ಯಂತ ಕಂಡು ಬಂದಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಆದರೆ ಇದೇ ರೀತಿ ಮಳೆಯಾದರೆ ಕಾಫಿ ಹಾಗೂ ಕರಿಮೆಣಸು ಬೆಳೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕಗೊಂಡಿದ್ದಾರೆ.