ನವದೆಹಲಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ ಭಾನುವಾರ ಸಂಜೆ ವೇಳೆಗೆ ಅಸನಿ ಚಂಡಮಾರುತವು ಗಂಟೆಗೆ 75 ಕಿ.ಮೀ. ವೇಗದಲ್ಲಿ ಉತ್ತರ ಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Advertisement
ಮಂಗಳವಾರದಿಂದ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಅಸನಿ ಚಂಡಮಾರುತದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಭಾನುವಾರ ಸಂಜೆಯವರೆಗೆ ಸೈಕ್ಲೋನಿಕ್ ಚಂಡಮಾರುತದ ರೂಪದಲ್ಲಿದ್ದು, ನಂತರ ಚಂಡಮಾರುತ ತೀವ್ರಗೊಂಡು ಮೇ10ರವರೆಗೂ ಇರಲಿದೆ. ಮೇ 11 ಮತ್ತು 12 ರಂದು ಮತ್ತೊಂದು ಚಂಡಮಾರುತವಾಗಿ ಪರಿಣಮಿಸುತ್ತದೆ. ಇದನ್ನೂ ಓದಿ: ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು
Advertisement
DD over Southwest BOB near lat 10.8°N and long 90.1°E, about 300 km WSW of Port Blair (Andaman Islands).To move northwestwards and intensify into a Cyclonic Storm over SE Bay of Bengal in the morning of 8th May and into a severe cyclonic storm over EC BOB by 08th May evening. pic.twitter.com/YEEH86qY9s
— India Meteorological Department (@Indiametdept) May 7, 2022
Advertisement
ಮಂಗಳವಾರ ಸಂಜೆಯಿಂದ ಮಳೆ ಆರಂಭವಾಗಲಿದ್ದು, ಒಡಿಶಾದ ಗಜಪತಿ, ಗಂಜಾಂ ಮತ್ತು ಪುರಿ 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಮತ್ತು ಬುಧವಾರ ಜಗತ್‍ಸಿಂಗ್‍ಪುರ, ಪುರಿ, ಖುರ್ದಾ, ಕಟಕ್ ಮತ್ತು ಗಂಜಾಂ ಎಂಬ 5 ಜಿಲ್ಲೆಗಳಿಗೆ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ