ರಾಯಚೂರು: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹಳ್ಳ ದಾಟುವಾಗ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಪತ್ತೆಪೂರ ಬಳಿ ಗೋಕುಲಸಾಬ್ ಹಳ್ಳದಲ್ಲಿ ನಡೆದಿದೆ.
ನೀರುಪಾಲಾದ ಯುವಕನನ್ನು ಜಿಲ್ಲೆಯ ಖಾಸಗಿ ಬ್ಯಾಂಕ್ ಉದ್ಯೋಗಿ, ಜಾಗೀರ ವೆಂಕಟಾಪುರ ಗ್ರಾಮದ ನಿವಾಸಿ 33 ವರ್ಷದ ಬಸವರಾಜ್ (Basavraj) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ
ಜಿಲ್ಲೆಯ ಹಲವೆಡೆ ರಾತ್ರಿಯಿಡೀ ಜೋರು ಮಳೆ ಸುರಿದಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳ ದಾಟಿ ಗ್ರಾಮ ಸೇರಲು ಯತ್ನಿಸಿದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಸೇತುವೆ ದಾಟಿ ಗ್ರಾಮಕ್ಕೆ ಹೋಗಲು ಸಾಹಸ ಮಾಡಿದ್ದ. ಆದರೆ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ. ಕೆಲಸ ಮುಗಿಸಿ ರಾತ್ರಿ ಗ್ರಾಮಕ್ಕೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ.ಇದನ್ನೂ ಓದಿ: ಉಪಯೋಗಕ್ಕೆ ಬಾರದ ಗೃಹಜ್ಯೋತಿ ಯೋಜನೆ – ವಿದ್ಯುತ್ ಇಲ್ಲದೇ ನಿತ್ಯ ಕತ್ತಲಲ್ಲೇ ಕಾಲ ಕಳೆಯುತ್ತಿದೆ ಈ ಗ್ರಾಮ
ಹಳ್ಳದ ದಂಡೆಯಲ್ಲಿ ಬೈಕ್ ಇಟ್ಟು ಹಳ್ಳದ ಸೇತುವೆ ದಾಟಲು ಮುಂದಾಗಿದ್ದ. ರಾತ್ರಿಯಾಗಿದ್ದರಿಂದ ಹೇಗಾದರೂ ಹಳ್ಳದಾಟಿ ಊರಿಗೆ ಹೋಗಲು ಯತ್ನಿಸುತ್ತಿದ್ದ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ರಾಯಚೂರು (Raichuru) ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.