ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೇ ಭಾರೀ ಮಳೆಯಾಗಿದ್ದು, ಮಂಗಳೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಮಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ದೇರೆಬೈಲ್, ಮಾಲೆಮಾರ್, ಜನವಸತಿ ಪ್ರದೇಶಕ್ಕೆ ರಾಜಕಾಲುವೆಯ ನೀರು ನುಗ್ಗಿದ್ದು ಹಲವು ಮನೆಯೊಳಗೂ ನೀರು ನುಗ್ಗಿದೆ. ರಸ್ತೆಯಲ್ಲಿ ನಿಂತಿರುವ ನೀರು, ವಾಹನ ಸವಾರರ ಪರದಾಟ ನಡೆಸಿದ್ದಾರೆ. ಮನೆಯೊಳಗಿರುವ ಸಾಮಾಗ್ರಿಗಳು ನೀರಿನಲ್ಲಿ ಮುಳುಗಿದ್ದು, ಜನ ಪಾಲಿಕೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.
Advertisement
Advertisement
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಬಂಟ್ವಾಳ, ಪುತ್ತೂರು, ಸುಳ್ಯ ಬೆಳ್ತಂಗಡಿ ತಾಲೂಕಿನಲ್ಲೂ ಭಾರೀ ಮಳೆ ಆಗಿದೆ. ಈ ಮೊದಲೇ ಜಿಲ್ಲಾಡಳಿತವು ಜಿಲ್ಲೆಯಲ್ಲಿ ದಟ್ಟ ಕಾರ್ಮೋಡ ಮುಸುಕಿದ ವಾತಾವರಣದ ಜೊತೆ ಮಳೆ ಆಗಲಿದೆ. ಇಂದು ಪೂರ್ತಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಮುದ್ರ, ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿತ್ತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ
Advertisement
Advertisement
ಶಾಲೆಗೆ ಬರಲು ತೊಂದರೆಯಾದಲ್ಲಿ ಅಂತಹ ಕಡೆ ರಜೆ ಘೋಷಿಸಲಾಗಿದೆ. ಈಗಾಗಾಲೇ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಮುಂಜಾಗ್ರತೆ ವಹಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಬಗ್ಗೆ ಕಟ್ಟೆಚ್ಚರ ಮಾಡಿ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕಾಗಿ ಶಿವಸೇನೆ ಹುಟ್ಟಿಲ್ಲ, ಶಿವಸೇನೆಗಾಗಿ ಅಧಿಕಾರ ಹುಟ್ಟಿದೆ: ಸಂಜಯ್ ರಾವತ್