ಮಡಿಕೇರಿ/ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರೋ ದಿಢೀರ್ ವರ್ಷಧಾರೆಗೆ ಒಂದೆಡೆ ಜನರು ಸಂತೋಷ ಪಡುತ್ತಿದ್ದಾರೆ ಇನ್ನೊಂದೆಡೆ ಆತಂಕಕ್ಕೊಳಗಾಗಿದ್ದಾರೆ. ಇತ್ತ ಮಡಿಕೇರಿಯಲ್ಲಿಯೂ ತುಂತುರು ಮಳೆಯಾಗಿದೆ.
ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮಡಿಕೇರಿ ನಗರದಲ್ಲೂ ಮೋಡ ಕವಿದ ವಾತಾವರಣವಿದೆ. ವರ್ಷದ ಮೊದಲ ಮಳೆ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೆ ಅಕಾಲಿಕ ಮಳೆ ಕಂಡು ಜನರು ಆತಂಕ ಪಡುತ್ತಿದ್ದಾರೆ.
Advertisement
Advertisement
ಇನ್ನೊಂದೆಡೆ ಮಲೆನಾಡಿನಲ್ಲೂ ದಿಢೀರ್ ಮಳೆ ಸುರಿಯುತ್ತಿದ್ದು, ಚಿಕ್ಕಮಗಳೂರು ಸೇರಿದಂತೆ ಸುತ್ತುಮುತ್ತ ಗ್ರಾಮಗಳಲ್ಲಿ ಭಾರೀ ಮಳೆ ಆಗುತ್ತಿದೆ. ವರ್ಷದ ಮೊದಲ ಮಳೆಗೆ ಮಲೆನಾಡಿಗರಲ್ಲಿ ಸಂತಸ ಮೂಡಿದೆ. ಕಳೆದ ವರ್ಷ ನಿರಂತರ ಮೂರು ತಿಂಗಳು ಸುರಿದಿದ್ದ ವರುಣ ಸಾಕಷ್ಟು ಕಷ್ಟ-ನಷ್ಟ ತಂದೊಡ್ಡಿದ್ದನು. ಈ ವರ್ಷ ಇನ್ಯಾವ ಅನಾಹುತ ಸೃಷ್ಠಿಯಾಗುತ್ತೋ ಎಂದು ಮಳೆ ಕಂಡು ಮಲೆನಾಡಿಗರಿಗೆ ಒಂದೆಡೆ ಖುಷಿಯಾದರೇ ಮತ್ತೊಂದೆಡೆ ಆತಂಕದಲ್ಲಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv