– 2018ರ ಪ್ರವಾಹ, ಭೂಕುಸಿತದ ಆತಂಕ
ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಎಲ್ಲಿ, ಯಾವಾಗ, ಯಾವ ಬೆಟ್ಟ ಕುಸಿಯುತ್ತೋ ಅನ್ನೋ ಆತಂಕ ಶುರುವಾಗುತ್ತೆ. ಎಲ್ಲೇ ಭೂಕುಸಿತ ಸಂಭವಿಸಿದ್ರೂ ಇಲ್ಲಿನ ಜನಕ್ಕೆ 2018ರ ಪ್ರವಾಹವೇ ಕಣ್ಣಮುಂದೆ ಬಂದು ಹೋಗುತ್ತೆ. ಇದೀಗ ನಿರಂತರ ಮಳೆಯಿಂದ (Heavy Rain) ಮತ್ತೆ ಜನರಲ್ಲಿ ಗುಡ್ಡ ಕುಸಿತದ ಆತಂಕ ಶುರುವಾಗಿದೆ.
ಹೌದು. ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಇರುವ ಮಲೆತಿರಿಕೆ ಅಯ್ಯಪ್ಪ ಬೆಟ್ಟದಲ್ಲಿ 2019ರಲ್ಲಿಯೇ ಹಲವೆಡೆ ದೊಡ್ಡ ದೊಡ್ಡ ಬಿರುಕುಗಳು ಮೂಡಿದ್ದವು. ಜೊತೆಗೆ ಹಲವೆಡೆ ಚಿಕ್ಕಪುಟ್ಟ ಭೂಕುಸಿತಗಳು (Landslides) ಅಂಭವಿಸಿವೆ. ವಿಪರ್ಯಾಸವೆಂದರೆ ಈ ಬೆಟ್ಟದಲ್ಲಿ ನೂರಾರು ಕುಟುಂಬಗಳು 35 ರಿಂದ 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿವೆ. ಇದನ್ನೂ ಓದಿ: 104 ಸಂಭವನೀಯ ಭೂಕುಸಿತ, ಪ್ರವಾಹ ಪ್ರದೇಶಗಳ ಗುರುತು – 2,995 ಕುಟುಂಬಗಳ ಸ್ಥಳಾಂತರಕ್ಕೆ ಪ್ಲ್ಯಾನ್
ಕಳೆದ 4-5 ವರ್ಷಗಳ ಹಿಂದೆಯೇ ಬೆಟ್ಟದಲ್ಲಿ ಸಾಕಷ್ಟು ಬಿರುಕುಗಳು ಮೂಡಿದ್ದರಿಂದ ಅಲ್ಲಿನ ಎಲ್ಲಾ ನಿವಾಸಿಗಳನ್ನು ಮಳೆಗಾಲದಲ್ಲಿ ಸ್ಥಳಾಂತರ ಮಾಡಿ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಲಾಗಿತ್ತು. ಈ ಕುಟುಂಬಗಳ ಒತ್ತಾಯದ ಮೇರೆಗೆ ವಿರಾಜಪೇಟೆ ಪಕ್ಕದಲ್ಲೇ ಇರುವ ಅಂಬಟ್ಟಿ ಎಂಬಲ್ಲಿ ನಿವೇಶನ ಹಂಚಲು ಅಂದಿನ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಹಾಗೇ ಹೇಳಿ 4-5 ವರ್ಷಗಳೇ ಕಳೆದರೂ ಇಂದಿಗೂ ಆ ಕೆಲಸ ಆಗಿಲ್ಲ. ಇದನ್ನೂ ಓದಿ: ಮುಂಗಾರು ಅಬ್ಬರ – ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ನಿಷೇಧ
ಹೀಗಾಗಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಇಲ್ಲಿನ ಬೆಟ್ಟದ ನಿವಾಸಿಗಳು ಆತಂಕಗೊಂಡಿದ್ದಾರೆ. ಈ ಬಾರಿ ಕಾಳಜಿ ಕೇಂದ್ರಕ್ಕೆ ಹೋಗಲ್ಲ, ಏನೇ ಆದ್ರೂ ಇಲ್ಲೇ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮಳೆಯಬ್ಬರ – ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ