ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸೂಕ್ಷ್ಮ ಪ್ರದೇಶದಲ್ಲಿ ವಾಸಿಸುತ್ತಿರುವವರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
Advertisement
ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಹಾಗೂ ರಾಮಕೊಲ್ಲಿಯ ಒಟ್ಟು 36 ಕುಟುಂಬದ 86 ಮಂದಿಯನ್ನು ನಗರದ ರೆಡ್ ಕ್ರಾಸ್ ಸಂಸ್ಥೆಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಒಡಗೂಡಿ ನೆರೆ ಸಂತ್ರಸ್ತರಿಗೆ ಸಕಲ ವ್ಯವಸ್ಥೆ ಕೈಗೊಂಡಿದೆ. ಇದನ್ನೂ ಓದಿ: ದಯವಿಟ್ಟು ರಜೆ ಕೊಡಬೇಡಿ: ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿ ಮನವಿ
Advertisement
Advertisement
ಭಾರೀ ಮಳೆಯಿಂದ ಕಳೆದ ಕೆಲವು ದಿನಗಳ ಹಿಂದೆ ರಾಮಕೊಲ್ಲಿ ಹಾಗೂ 2ನೇ ಮೊಣ್ಣಂಗೇರಿಯಲ್ಲಿ ಭೂ ಕುಸಿತ ಘಟನಾವಳಿಗಳು ನಡೆದಿದ್ದವು. ಮುನ್ನೆಚ್ಚರಿಕೆಯಾಗಿ ಅವರನ್ನು ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ರಾಮಕೋಲ್ಲಿಯ ಬೆಟ್ಟ ಪ್ರದೇಶದಲ್ಲಿ ಬೆಟ್ಟದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಈ ಹಿಂದೆ ಬೆಟ್ಟ ಪ್ರದೇಶವನ್ನು ಏರಿ ಸ್ಥಳದಿಂದ ವರದಿ ಮಾಡಿತ್ತು. ಹೀಗಾಗಿ ಮಳೆ ಹೆಚ್ಚಾಗಿದ ಹಿನ್ನೆಲೆಯಲ್ಲಿ ಅಲ್ಲಿಯ ಜನಗಳನ್ನು ಜಿಲ್ಲಾಡಳಿತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದೆ.