ಮಡಿಕೇರಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಇಂದು ಕೊಡ ಮುಂದುವರಿದಿದೆ. ಕಾವೇರಿ ನದಿ ಸೇರಿದಂತೆ ಹಲವು ಹೊಳೆಗಳು ಉಕ್ಕಿ ಹರಿಯುತ್ತಿದೆ. ಕೊಯಿನಾಡಿನಲ್ಲಿ ಜನರ ಕಣ್ಣೇದುರೇ ಕುಸಿದು ಬಿದ್ದ ಗುಡ್ಡ ನೋಡಿ ಜನ ಆತಂಕದಿಂದ ಓಡಿದ್ದಾರೆ.
ಮಡಿಕೇರಿ ತಾಲೂಕಿನ ಕೊಯಿನಾಡು ಗ್ರಾಮದಲ್ಲಿರುವ ಶಾಲೆಯೊಂದರ ಹಿಂಭಾಗದಲ್ಲಿ ಇದ್ದಂತಹ ಬೆಟ್ಟ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಹೆದರಿ ಕಿರುಚಾಡಿ ಓಡಿದ್ದಾರೆ. ಬೆಟ್ಟ ಕುಸಿತದ ಪರಿಣಾಮ ಶಾಲೆಯ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ – ಟ್ರಾಫಿಕ್ ಜಾಮ್
ಇತ್ತ ಬ್ರಹ್ಮಗಿರಿ ತಪ್ಪಲಲ್ಲಿ ಮಳೆ ಹೆಚ್ಚಾದ ಪರಿಣಾಮ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಭಾಗಮಂಡಲ-ನಾಪೋಕ್ಲು ರಸ್ತೆ ಸಂಪೂರ್ಣ ಬಂದ್ ಆಗಿದ್ದು ರಸ್ತೆಯ ಮೇಲೆ 2 ಅಡಿಗೂ ಹೆಚ್ಚು ನೀರು ನಿಂತಿದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಜಿಲ್ಲಾಡಳಿತ ಬೋಟ್ ವ್ಯವಸ್ಥೆ ಕಲ್ಪಿಸಿದೆ. ಮುಕ್ಕೋಡ್ಲಿನಲ್ಲಿ ಮುಕ್ಕೋಡ್ಲು ಹೊಳೆ ಉಕ್ಕಿ ಹರಿದ ಪರಿಣಾಮ ಹೊಲ ಗದ್ದೆಗಳಿಗೆ ಪ್ರವಾಹ ನೀರು ನುಗ್ಗಿದೆ. ಮುಕ್ಕೋಡ್ಲು ಹಮ್ಮಿಯಾಲ ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಇದನ್ನೂ ಓದಿ: ಕೊಡಗಿನ ಚೆಂಬುವಿನಲ್ಲಿ ಇಂದೂ ಭೂಕಂಪನ- ಆತಂಕಕ್ಕೀಡಾದ ಜನ
ಕೊಡಗು-ದಕ್ಷಿಣಕನ್ನಡ ಗಡಿಯಲ್ಲಿ ಭಾರೀ ಮಳೆಯಿಂದಾಗಿ ಕೊಯಿನಾಡು ಸಮೀಪ ಪಯಸ್ವಿನಿ ನದಿ ಉಕ್ಕಿ ಹರಿದು ಗ್ರಾಮದ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿಂಡಿ ಅಣೆಕಟ್ಟು ಬಳಿ ಮರ ಬ್ಲಾಕ್ ಆಗಿರುವ ಪರಿಣಾಮ ಗ್ರಾಮದ 4 ಮನೆಗಳಿಗೆ ನೀರು ನುಗ್ಗಿದು, ಮನೆಯಲ್ಲಿ ಇದ್ದ ವಸ್ತುಗಳಿಗೆ ಹಾನಿಯಾಗಿದೆ.
Live Tv
[brid partner=56869869 player=32851 video=960834 autoplay=true]