ತಿರುವನಂತಪುರ: ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಮಹಾ ಮಳೆಗೆ ಮೂವರು ಬಲಿಯಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
Advertisement
ಕೊಟ್ಟಾಯಂ ಜಿಲ್ಲೆಯಲ್ಲಿ ಗುಡ್ಡ ಕುಸಿತವಾಗಿದ್ದು, ಕೊಟ್ಟಾಯಂನ ಕೂಟ್ಟಿಕ್ಕಲ್ ಪ್ಲಾಪಳ್ಳಿ ಎಂಬಲ್ಲಿ ಭೂಕುಸಿತವಾಗಿ 3 ಮನೆ ನೀರಲ್ಲಿ ಕೊಚ್ಚಿಹೋಗಿದೆ. ಒಂದೇ ಮನೆಯಲ್ಲಿ ಮೂವರು ಸಾವನ್ನಪ್ಪಿ 10 ಮಂದಿ ನಾಪತ್ತೆಯಾಗಿದ್ದಾರೆ. ಪೂಂಜಾರ್ ನಲ್ಲಿ ಕೇರಳ ಸರ್ಕಾರಿ ನಿಗಮದ ಬಸ್ ಮುಳುಗಡೆ ಆಗಿದೆ. ಕಾರೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ಜಯಲಲಿತಾ ಸಮಾಧಿಗೆ ತೆರಳಿದ ಚಿನ್ನಮ್ಮ- ಮತ್ತೆ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ?
Advertisement
Advertisement
ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ಇನ್ನಷ್ಟು ಧಾರಾಕಾರ ಮಳೆ ಆಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಪಥನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತಿರುವನಂತಪುರಂ, ಕೊಲ್ಲಂನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳ ರಾಜ್ಯದ ಬಹುತೇಕ ಎಲ್ಲ ಡ್ಯಾಂಗಳ ಎಲ್ಲ ಗೇಟ್‍ಗಳನ್ನೂ ತೆರೆಯಲಾಗುತ್ತಿದ್ದು, ಪಂಪಾ ನದಿಗೆ ಇಳಿಯದಂತೆ ಶಬರಿಮಲೆಗೆ ಭಕ್ತರಿಗೆ ಸೂಚಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಕಾರಣ, ಮುಂದಿನ 24 ಗಂಟೆ ರಾಜ್ಯದ ವಿವಿಧೆಡೆ ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದನ್ನೂ ಓದಿ: ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ – ತೊಂದ್ರೆ ಕೊಡ್ತಿದ್ದ ವ್ಯಕ್ತಿಯ ವಿರುದ್ಧ ರೇವಣ್ಣ ಆಕ್ರೋಶ
Advertisement