ಬೆಂಗಳೂರು: ಅಕಾಲಿಕ ಹಿಂಗಾರು ಮಳೆ ಅಬ್ಬರದಿಂದ ರಾಜ್ಯ ತತ್ತರಿಸಿದೆ. ನವೆಂಬರ್ 23 ಅಂದರೆ ಮಂಗಳವಾರದವರೆಗೂ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
ಇಂದು ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಇವತ್ತು ಧಾರಾಕಾರ ಮಳೆಯಾಗಬಹುದು. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮಳೆ ಅಬ್ಬರದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲ. ಆದರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದನ್ನೂ ಓದಿ: ದೇಶದ ಮೊದಲ ಬಾಸ್ಕೆಟ್‌ಬಾಲ್ ಲೀಗ್‍ಗೆ ಅದ್ಧೂರಿ ಚಾಲನೆ
Advertisement
Advertisement
ಈ ಬಾರಿ ಅಕಾಲಿಕ ಹಿಂಗಾರು ಮಳೆಯಿಂದಾಗಿ ರಾಜ್ಯದಲ್ಲಿ ಆಗಿರುವ ಅನಾಹುತ ಅಷ್ಟಿಷ್ಟಲ್ಲ. ಕಳೆದ ಬಾರಿಯ ಹಿಂಗಾರಿಗೆ ಹೋಲಿಸಿದರೆ ಈ ಬಾರಿ ಶೇಕಡಾ 390ರಷ್ಟು ಅಧಿಕ ಮಳೆ ಆಗಿದೆ. 1,400 ಹೆಚ್ಚು ಮನೆಗಳು ಕುಸಿದಿವೆ. 6 ಜಿಲ್ಲೆಗಳಲ್ಲಿ 92,088 ಹೆಕ್ಟೇರ್‍ನ್ನಷ್ಟು ಬೆಳೆ ನಾಶವಾಗಿದೆ. 30ಕ್ಕೂ ಹೆಚ್ಚು ಜಾನುವಾರುಗಳು ಜೀವ ಕಳೆದುಕೊಂಡಿವೆ. 193 ತಾಲೂಕುಗಳಲ್ಲಿ ಭಾರೀ ಮಳೆ ಆಗಿದೆ. ಕಟಾವಿಗೆ ಸಿದ್ಧವಾಗಿದ್ದ ಬೆಳೆಗಳು ಜಮೀನಿನಲ್ಲಿ ಕೊಳೆತು ಹೋಗಿವೆ. ಇದನ್ನೂ ಓದಿ: ವಿದರ್ಭ ವಿರುದ್ಧ ಕರ್ನಾಟಕಕ್ಕೆ ರೋಚಕ ಜಯ – ಫೈನಲ್‍ಗೆ ಲಗ್ಗೆ
Advertisement