ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಮನೆ ಮೇಲೆ ಮರ ಬಿದ್ದು 6 ಜನರಿಗೆ ಗಾಯವಾಗಿದೆ.
Advertisement
ಮಳೆಯ ಅಬ್ಬರಕ್ಕೆ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡನ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಎನ್‍ಹೆಚ್4ಂಯ ಗೋವಾ-ಅನಮೋಡ ರಸ್ತೆ ತಾತ್ಕಾಲಿಕ ಸ್ಥಗಿತವಾಗಿದೆ. ಪ್ರಸ್ತುತ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ಜೊಯಿಡಾದ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಆಡಳಿತದಿಂದ ಗುಡ್ಡದ ಮಣ್ಣಿನ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಮತ ಹಾಕಿ ವ್ಯರ್ಥ ಮಾಡಬೇಡಿ, ಬಿಜೆಪಿಯಿಂದ ತೃಪ್ತಿ ಹೊಂದದವರು ನಮಗೆ ಮತ ಹಾಕಿ: ಕೇಜ್ರಿವಾಲ್
Advertisement
Advertisement
ಹೊನ್ನಾವರದ ಹಳದಿಪುರದ ಬಗ್ರಾಣಿ ಕ್ರಾಸ್ ಬಳಿ ಮನೆಯ ಮೇಲೆ ಮರ ಬಿದ್ದು ಆರು ಜನರಿಗೆ ಗಾಯವಾಗಿದ್ದು, ಹತ್ತುಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಸಂದ್ಯ ಶೇಟ್, ಅನಿತಾ ಯೋಗೇಶ್ ಶೇಟ್, ಅಕಿಲೇಶ್ ಶೇಟ್, ರೂಪ.ಆರ್, ಶೇಟ್, ಯೋಗೇಶ್ ಹರಿಕಾಂತ್, ಆರುಷ್ ಹರಿಕಾಂತ್ ಗಾಯಗೊಂಡವರಾಗಿದ್ದು, ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.