ಕೊಪ್ಪಳ: ಜಿಲ್ಲೆಯ ನೂತನ ತಾಲೂಕು ಕಾರಟಗಿಯಲ್ಲಿ ಇಂದು ಬರೋಬ್ಬರಿ 1 ಗಂಟೆಗಳ ಕಾಲ ವರುಣ ಅಬ್ಬರಿಸಿದ್ದಾನೆ. ಕಾರಟಗಿ ನಗರದಲ್ಲಿ ಶಾಸಕ ಶಿವರಾಜ್ ತಂಗಡಿ ಪ್ರಚಾರಕ್ಕಾಗಿ ಮನೆಯ ಮುಂದೆ ಬೃಹತ್ ಶೆಡ್ ನಿರ್ಮಾಣ ಮಾಡಿದ್ದರು. ಮಳೆಯ ಜೊತೆಗೆ ಬಿರುಗಾಳಿ ಬೀಸಿದ್ದರಿಂದ ಶೆಡ್ ಧರೆಗುಳಿದಿದೆ.
ಶೆಡ್ ಕೆಳಗೆ ನಿಲ್ಲಿಸಿದ್ದ 7 ಕಾರುಗಳು ಸಂಪೂರ್ಣ ಜಖಂಗೊಂಡಿವೆ. ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ನಗರದ ಬೃಹತ್ ಮರಗಳು ಅಂಗಡಿ ಮುಂಗಟ್ಟುಗಳ ಮೇಲೆ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಪನ್ನಾಪುರ ಗ್ರಾಮದಲ್ಲಿ ರೈತ ಚನ್ನಬಸಪ್ಪ ನಡವಿ ಎಂಬವರ ಭತ್ತ ತುಂಬಿರುವ ಗೊಡನ್ ಮೇಲೆ ಹಾಕಲಾದ ತಗಡುಗಳು ಬಿರುಗಾಳಿಗೆ ಹಾರಿಹೋಗಿವೆ. ಇದರಿಂದ ಭತ್ತದ ಚೀಲಗಳು ಸಂಪೂರ್ಣ ಮಳೆಗೆ ನೆನೆದು ಕೋಟ್ಯಾಂತರ ರೂಪಾಯಿ ಭತ್ತ ನಷ್ಟವಾಗಿದೆ.
Advertisement
ಒಂದು ಕಡೆ ಬಿಸಿಲಿನಿಂದ ತತ್ತರಿಸಿದ ಜನರಿಗೆ ಮಳೆರಾಯ ತಂಪೆರೆದ್ರೆ, ಇತ್ತ ವ್ಯಾಪಾರಿಗಳು ಮತ್ತು ರೈತರು ಕಂಗಾಲಾಗಿದ್ದಾರೆ.