ಕಲಬುರಗಿ: ಗುರುವಾರ ರಾತ್ರಿಯಿಂದ ಕಲಬುರ್ಗಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯುದ್ದಕ್ಕೂ ಮಂಡಿಯವರೆಗೂ ನೀರು ತುಂಬಿಕೊಂಡಿದೆ.
ರಾತ್ರಿ ಸುಮಾರು 11 ಗಂಟೆಯಿಂದ ಮಳೆ ಸುರಿಯಲಾರಂಭಿಸಿದ್ದು, ವರುಣನ ಅರ್ಭಟಕ್ಕೆ ಜನರು ಪರಾದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗೆ ಕಲಬುರಗಿ ನಗರದ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಇದರಿಂದ ಮಾಲೀಕರಿಗೆ ತಮ್ಮ ಅಂಗಡಿ ತೆರೆಯಲು ಸಾಧ್ಯವಾಗದೆ ಕಷ್ಟ ಪಡುತ್ತಿದ್ದಾರೆ. ಇತ್ತ ಮನೆಯಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.
Advertisement
Advertisement
ಮಳೆಯಿಂದ ಅನ್ನದಾತರು ಕೂಡ ಸಂಕಷ್ಟ ಸಿಲುಕಿದ್ದಾರೆ. ತೊಗರಿ ಬೆಳೆದ ರೈತನ ಬದಕು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತೊಗರಿ ಬೆಳೆಯನ್ನ ಕಟಾವು ಮಾಡಿದ್ದ ಬಹಳಷ್ಟು ರೈತರು ತಮ್ಮ ಹೊಲಗದ್ದೆಯಲ್ಲಿ ಬೆಳೆಯನ್ನು ಶೇಕರಿಸಿಟ್ಟಿದ್ದರು. ಮಳೆಯಿಂದ ರೈತ ಶೇಖರಿಸಿಟ್ಟಿದ್ದ ತೊಗರಿ ಬೆಳೆ ನೀರು ಪಾಲಾಗಿದೆ.
Advertisement
ಅಷ್ಟೇ ಅಲ್ಲದೇ ರಸ್ತೆ ಬಡಾವಣೆಗಳಲ್ಲಿ ನುಗ್ಗಿದ ನೀರಿನಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ರಸ್ತೆಯಲ್ಲಿ ಮಂಡಿಯುದ್ದಕ್ಕೂ ನೀರು ನಿಂತಿರುವುದರಿಂದ ವಾಹನ ಸವಾರರು ಕೂಡ ಪರದಾಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv