ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿವರೆಗೂ ವರುಣನ ಆರ್ಭಟ ಜೋರಾಗಿದೆ.
ನಾಗಸಂದ್ರ, ದಾಸರಹಳ್ಳಿ, ಜಾಲಹಳ್ಳಿ, ಚಿಕ್ಕಬಿದಿರಕಲ್ಲು, ಪೀಣ್ಯ ಸೇರಿದಂತೆ ಹಲವೆಡೆ ಮಳೆ ಜೋರಾಗಿದೆ. ಮಳೆ ಆರ್ಭಟಕ್ಕೆ ಬೆಂಗಳೂರಿನ ಚನ್ನನಾಯಕನ ಹಳ್ಳಿಯ ಭವಾನಿನಗರದಲ್ಲಿ 70ಕ್ಕೂ ಮನೆಗಳಿಗೆ ನೀರು ನುಗ್ಗಿದೆ. ನೂರಾರು ಬೈಕ್ ಮತ್ತು ಕಾರುಗಳು ನೀರಿನಲ್ಲಿ ಮುಳುಗಡೆ ಆಗಿವೆ. ತಡರಾತ್ರಿ 10 ಗಂಟೆಯಿಂದ ಆರಂಭವಾದ ಮಳೆ 12 ಗಂಟೆವರೆಗೂ ಸತತವಾಗಿ ಮಳೆ ಸುರಿದಿದ್ದು ಜನರ ನಿದ್ದೆಗೆಡಿಸಿದೆ.
Advertisement
Advertisement
ಭವಾನಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಜನ ಹೊರಬರದಂತ ಪರಿಸ್ಥಿತಿ ಎದುರಾಗಿದೆ. ಮನೆ ಒಳಗಡೆ ಇರುವ ಜನರನ್ನು ಮನೆ ಮಹಡಿ ಮೇಲೆ ಶಿಫ್ಟ್ ಮಾಡಲಾಗಿದೆ. ಪ್ರವಾಹ ಪರಿಸ್ಥಿತಿಯಂತಹ ಮಳೆ ನೀರು ಹರಿದು ಬರಲು ಕಾರಣ ಸರಿಯಾದ ರೀತಿ ಮೋರಿ ಇಲ್ಲದೇ ಇರುವುದು ಮತ್ತು ಅಸಂಪರ್ಕ ರಾಜಕಾಲುವೆ ಎನ್ನಲಾಗುತ್ತಿದೆ.
Advertisement
Advertisement
ಮನೆಗಳಿಗೆ ನುಗ್ಗಿದ ನೀರನ್ನು ಜನ ಹೊರಗಡೆ ಎತ್ತು ಹಾಕುವುದರಲ್ಲಿ ನಿರತರಾಗಿದ್ದಾರೆ. ತಡರಾತ್ರಿ ಮಳೆ ಹಾನಿ ಪ್ರದೇಶಕ್ಕೆ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಭೇಟಿ ನೀಡಿದರು. ಭೇಟಿ ನೀಡಿ ಮಳೆ ಹಾನಿಗೆ ಒಳಗಾದ ಮನೆಗಳನ್ನು ವೀಕ್ಷಣೆ ಮಾಡಿ ಜನರಿಗೆ ಧೈರ್ಯ ತುಂಬಿದರು.
ಇದೇ ವೇಳೆ ಮಾತನಾಡಿದ ಅವರು 150ಕ್ಕೂ ಮನೆಗಳಿಗೆ ನೀರು ನುಗ್ಗಿದೆ. ಎಲ್ಲರನ್ನು ರಕ್ಷಣೆ ಮಾಡಿದ್ದಾರೆ. ಕೆಲವರನ್ನು ಮನೆ ಮಹಡಿಯ ಮೇಲೆ ಇರಿಸಲಾಗಿದೆ. ಆತಂಕ ಪಡುವಂತದೆನಿಲ್ಲಾ. ಮನೆಗಳಲ್ಲಿ ನೀರು ನಿಂತಿರುವ ಆಶ್ರಯಕ್ಕಾಗಿ ಕಲ್ಯಾಣ ಮಂಟಪಗಳನ್ನು ಬುಕ್ ಮಾಡಲಾಗಿದೆ ಯಾರು ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದರು.
ಇಷ್ಟೆಲ್ಲಾ ಗಲಾಟೆ ಆದರೂ ಯಾವೊಬ್ಬ ಸ್ಥಳೀಯ ಕಾರ್ಪೋರೇಟರ್ ಆಗಲಿ, ಬಿಬಿಎಂಪಿ ಅಧಿಕಾರಿಗಳು ಇರಲಿಲ್ಲ. ಅಲ್ಲದೆ ಇದೇ ವೇಳೆ ಜನರು ಅನರ್ಹ ಶಾಸಕ ಎಸ್.ಟಿ ಸೋಮ್‍ಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.