ಮಂಗಳೂರು: ಮಹಾ ಮಳೆಯಿಂದ ತತ್ತರಿಸಿದ್ದ ಮಂಗಳೂರು ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಚಂಡಮಾರುತ ಪರಿಣಾಮದಿಂದ ಕೆಲವು ದಿನಗಳಿಂದ ದಿನಪೂರ್ತಿ ಸುರಿದ ಮಳೆರಾಯ ತನ್ನ ಪ್ರತಾಪ ನಿಲ್ಲಿಸಿದ್ದಾನೆ. ಆದರೆ ಈ ಮಳೆಗೆ ಮಂಗಳೂರಿನಲ್ಲಿ ಬರೋಬ್ಬರಿ ಸುಮಾರು 20 ಕೋಟಿ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಳೆಯಿಂದ ರಸ್ತೆ, ಮನೆ, ಮತ್ತು ಸೇತುವೆಗಳು ಸೇರಿದಂತೆ ಒಟ್ಟಾರೆ 20 ಕೋಟಿ ರೂ. ನಷ್ಟ ಆಗಿದೆ. ರಸ್ತೆ ಮತ್ತು ಸೇತುವೆಗಳಿಂದ 16.61 ಕೋಟಿ ರೂ. ನಷ್ಟವಾಗಿದೆ. ಇನ್ನು ಈ ಮಳೆಯಿಂದ 560 ಮನೆಗಳಿಗೆ ಹಾನಿಯಾಗಿದ್ದು, ಸುಮಾರು 4 ಕೋಟಿ ರೂ. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ರಸ್ತೆ ಹಾನಿಯಿಂದ 3.51 ಕೋಟಿ ರೂ., ಸೇತುವೆಯಿಂದ 1 ಕೋಟಿ ರೂ. ಮತ್ತು ವಿದ್ಯುತ್ ತಂತಿ, ಕಂಬ ಹಾಗೂ ಪರಿವರ್ತಕಗಳಿಂದ 1.95 ಕೋಟಿ ರೂ. ನಷ್ಟವಾಗಿದೆ ತಿಳಿದು ಬಂದಿದೆ.
Advertisement
ಮಂಗಳೂರಿನ ಮಹಾಮಳೆ ಹಠಾತ್ ಬ್ರೇಕ್ ಹಾಕಿದ್ದು, ಕರಾವಳಿ ಜನ ದೀರ್ಘ ನಿಟ್ಟುಸಿರು ಬಿಟ್ಟಿದ್ದಾರೆ. ಹವಾಮಾನ ಇಲಾಖೆ ಮಾತ್ರ ಇನ್ನೆರಡು ದಿನವೂ ಮಳೆಯಾಗುವ ಮುನ್ಸೂಚನೆ ನೀಡಿದ್ದು ಜಿಲ್ಲಾಡಳಿತ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನೂ ಮಂಗಳೂರಿಗೆ ಕರೆಸಿಕೊಂಡಿದೆ. ನಗರದಲ್ಲಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ.
Advertisement
ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದಿರುವುದು, ಕಟ್ಟಡ ನಿರ್ಮಾಣಗಳು ರಸ್ತೆಯಲ್ಲೇ ಆಗಿರೋದು ಹಾಗೂ ಕಾಲುವೆಗಳ ಒತ್ತುವರಿ ಆಗಿದ್ದೇ ಈ ಅವಾಂತರಕ್ಕೆ ಕಾರಣ ಅನ್ನೋದು ಬೆಳಕಿಗೆ ಬಂದಿದೆ.
Advertisement