ದಾವಣಗೆರೆ: ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ಸುರಿದ ಮಳೆಗೆ (Rain) ಜಿಲ್ಲೆಯಲ್ಲಿ 93 ಮನೆಗಳು ಭಾಗಶಃ ಹಾನಿಯಾಗಿದ್ದು, 12 ಮನೆಗಳು ತೀವ್ರ ಹಾನಿಗೊಳಗಾಗಿವೆ ಎಂದು ಜಿಲ್ಲಾಧಿಕಾರಿ ಜಿ.ಎಂ ಗಂಗಾಧರಸ್ವಾಮಿ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ತೀವ್ರತರವಾಗಿ ಹಾನಿಯಾದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ, ಭಾಗಶಃ ಹಾನಿಯಾದ ಮನೆಗಳಿಗೆ 4 ರಿಂದ 6 ಸಾವಿರ ರೂ. ನೀಡಲಾಗುವುದು. 14.5 ಕೋಟಿ ರೂ. ಹಣ ಜಿಲ್ಲಾಡಳಿತದ ಖಾತೆಯಲ್ಲಿ ಇದೆ. ಇನ್ನೂ ಮಳೆಯಿಂದ ಉಂಟಾದ ಅವಾಂತರಗಳಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Valmiki Scam | ಹೈದರಾಬಾದ್ ಚುನಾವಣೆಗೆ ಮದ್ಯ ಹಂಚಲು ಗಿಫ್ಟ್ ಕೂಪನ್: ಇಡಿ
Advertisement
Advertisement
9 ಸ್ಥಳಗಳನ್ನು ಪ್ರವಾಹಕ್ಕೆ ಈಡಾಗುವ ಸ್ಥಳಗಳು ಎಂದು ಗುರುತಿಸಲಾಗಿದೆ. ತುಂಗಭದ್ರಾನದಿಯಲ್ಲಿ 12 ಮೀಟರ್ ನೀರು ಬಂದರೆ ಮಾತ್ರ ಪ್ರವಾಹ ಉಂಟಾಗಲಿದ್ದು, ಈಗ ನದಿಯಲ್ಲಿ 9 ಮೀಟರ್ ನೀರು ಹರಿಯುತ್ತಿದ್ದು, ಯಾವುದೇ ಪ್ರವಾಹ ಭೀತಿ ಇಲ್ಲ. ಪ್ರವಾಹ ಭೀತಿಯಲ್ಲಿರುವ ಸ್ಥಳಗಳಲ್ಲಿ ಜನರನ್ನು ಸುರಕ್ಷಿತವಾಗಿ ಇಡುವ ಕೆಲಸ ಮಾಡಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕಾಸು ಇಲಾಖೆಗೆ ಬೆಳಗ್ಗೆಯೇ ನಿರ್ಮಲಾ ಭೇಟಿ – ಬಜೆಟ್ ಪ್ರತಿ ಜೊತೆ ಪೋಸ್