ಚಿಕ್ಕಮಗಳೂರು: ಕಾಫಿನಾಡು ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದ ಪರಿಣಾಮ ಸ್ಥಳೀಯರು ಮಳೆ ದೇವನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.
Advertisement
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇವರಿಗೆ ನೆಮ್ಮಾರ್ ಸೀಮೆಯವರು ವಿಶೇಷ ಪೂಜೆ ಸಲ್ಲಿಸಿ ಮಳೆ ನಿಲ್ಲುವಂತೆ ಬೇಡಿಕೊಂಡಿದ್ದಾರೆ. ಕಿಗ್ಗಾದ ಋಷ್ಯಶೃಂಗೇಶ್ವರ ಮಳೆ ಬೇಕು ಅಂದಾಗ ಸುರಿಸೋ, ಬೇಡವೆಂದಾಗ ನಿಲ್ಲಿಸೋ ಮಳೆ ದೇವರು ಎಂದೇ ಪ್ರಸಿದ್ಧಿ ಹೊಂದಿದೆ. ಇದನ್ನೂ ಓದಿ: ʼಬೆಲ್ಲದ ದೋಸೆʼ ಮಾಡುವ ಸೂಪರ್ ವಿಧಾನ
Advertisement
Advertisement
ಪ್ರಸ್ತುತ ಶೃಂಗೇರಿಯಲ್ಲಿ ವಾಡಿಕೆಗಿಂತ ಡಬಲ್ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಕಾಫಿ, ಮೆಣಸು, ಅಡಿಕೆಗೆ ಕೊಳೆಯುವ ರೋಗದ ಭೀತಿ ಜನರಲ್ಲಿ ಆವರಿಸಿದೆ. ಪರಿಣಾಮ ಸ್ಥಳೀಯರು ಅತಿವೃಷ್ಟಿ ನಿವಾರಿಸೋ ಎಂದು ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Advertisement
ಈ ದೇವನಿಗೆ ಅತಿವೃಷ್ಟಿ-ಅನಾವೃಷ್ಟಿ ವೇಳೆ ಸರ್ಕಾರವೇ ಪೂಜೆ ಸಲ್ಲಿಸಿದೆ.