ಬೆಂಗಳೂರು: ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿತ್ತು. ಮಳೆಯಿಂದಾಗಿ ನಗರದ ರೋಡುಗಳೇ ನದಿಯಂತಾಗಿದ್ದು, ವಾಹನ ಸವಾರರು ಹಲವು ಗಂಟೆಗಳ ಕಾಲ ಪರದಾಡಿದ್ದಾರೆ.
ಮಳೆಯ ಜೊತೆ ಭಾರೀ ಗಾಳಿಯೂ ಇದ್ದಿದ್ದರಿಂದ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇನ್ನು ಮೂರು ದಿನಗಳ ಮಳೆ ಮುಂದುವರೆಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಹೀಗಾಗಿ ನಿನ್ನೆ ರಾತ್ರಿ ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಎಲ್ಲಿ ಎಷ್ಟು ಮಳೆಯಾಗಿದೆ?
ಹೆರೋಹಳ್ಳಿ – 94 ಮಿಮೀ
ರಾಧಾಕೃಷ್ಣ ಟೆಂಪಲ್ ವಾರ್ಡ್ – 72 ಮಿಮೀ
ಮನೋರನ್ ಪಾಳ್ಯ – 64 ಮಿಮೀ
ಕೊಡಿಗೆಹಳ್ಳಿ – 63 ಮಿಮೀ
ರಾಜಮಹಲ್ ಗುಟ್ಟಹಳ್ಳಿ – 62 .5 ಮಿಮೀ
ರಾಜಾಜಿನಗರ – 61.5 ಮಿಮೀ
ಕುಶಾಲನಗರ – 58.5 ಮಿಮೀ
ನಾಗರಭಾವಿ – 55 ಮಿಮೀ
ದಯಾನಂದ ನಗರ – 54 ಮಿಮೀ
ವಿಶ್ವೇಶ್ವರಪುರಂ – 53.5 ಮಿಮೀ
ಬಸವೇಶ್ವರ ನಗರ – 53 ಮಿಮೀ
ಬ್ಯಾಟರಾಯನಪುರ – 53 ಮಿಮೀ
ಕೆ. ಆರ್ ಪುರಂ – 52.5 ಮಿಮೀ
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ