ಬೆಂಗಳೂರು: ಮಳೆಗಾಲ ಇನ್ನೂ ಶುರುವಾಗಿಲ್ಲ. ಆದರೆ ಬೇಸಿಗೆಯಲ್ಲೇ ಸುರಿದ ಭಾರೀ ಮಳೆಗೆ ಬೆಂಗಳೂರು ಮುಳುಗಿದೆ. ಮಂಗಳವಾರ ರಾತ್ರಿ ಹಲವು ಕಡೆಗಳಲ್ಲಿ 100 ಮಿಮೀ ಹೆಚ್ಚು ಮಳೆಯಾಗಿದೆ.
Advertisement
ಭಾರೀ ಮಳೆಯಿಂದ ರಸ್ತೆಗಳು ಈಜುಕೊಳದಂತಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಿನ್ನೆ ರಾತ್ರಿಯಿಂದ ಬೆಳಗಿನ ಜಾವ 7 ಗಂಟೆವರೆಗೂ ಮಳೆ ಬಿಡದೆ ಸುರಿದಿದೆ. ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಿದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಗೆ ಅಂಕಿತ ಬಿದ್ದರೂ ಕೊಡಗಿನಲ್ಲಿ ನಿಲ್ತಿಲ್ಲ ಮತಾಂತರ
Advertisement
Advertisement
ಎಲ್ಲಿ ಎಷ್ಟು?
ಹೊರಮಾವುವಿನಲ್ಲಿ ಅತ್ಯಧಿಕ 155 ಮಿಮೀ ಮಳೆ, ಯಲಹಂಕ 129 ಮಿಮೀ, ವಿದ್ಯಾಪೀಠ 127 ಮಿಮೀ, ರಾಜಮಹಲ್ ಗುಟ್ಟಹಳ್ಳಿ 122 ಮಿಮೀ, ನಾಗಪುರ 120 ಮಿಮೀ, ಸಂಪಂಗಿರಾಮನಗರ 119 ಮಿಮೀ, ದಾಸರಹಳ್ಳಿ 110 ಮಿಮೀ, ವಿದ್ಯಾರಣ್ಯಪುರ 109 ಮಿಮೀ, ದೊಡ್ಡನೆಕ್ಕುಂದಿ 108 ಮಿಮೀ, ಬಾಣಸವಾಡಿ 106 ಮಿಮೀ, ಜಕ್ಕೂರು 102 ಮಿಮೀ, ಸಿಂಗಸಂದ್ರ 98 ಮಿಮೀ, ವನ್ನಾರ್ ಪೇಟೆ 85 ಮಿಮೀ, ವಿವಿಪುರಂ 82 ಮಿಮೀ ಮಳೆಯಾಗಿದೆ.
Advertisement
ಕೋರಮಂಗಲ 80 ಮಿಮೀ, ಚಾಮರಾಜಪೇಟೆ 79 ಮಿಮೀ, ದೊಮ್ಮಲೂರು 79 ಮಿಮೀ, ಎಚ್.ಎ.ಎಲ್, ಬಿಟಿಎಂ ಬಡಾವಣೆ 77 ಮಿಮೀ, ನಾಯಂಡಹಳ್ಳಿ 73 ಮಿಮೀ, ಬೆಳ್ಳಂದೂರು 66 ಮಿಮೀ, ಬಿಳೇಕಳ್ಳಲ್ಲಿ 65 ಮಿಮೀ, ಮಾರತ್‍ಹಳ್ಳಿ, ಸಾರಕ್ಕಿ 61 ಮಿಮೀ, ವರ್ತೂರು 59 ಮಿಮೀ, ಜ್ಞಾನಭಾರತಿ 53 ಮಿಮೀ, ಕೋಣನಕುಂಟೆ 44 ಮಿಮೀ ಮತ್ತು ಕೆಂಗೇರಿ 37 ಮಿಮೀ ಮಳೆಯಾಗಿದೆ. ಇದನ್ನೂ ಓದಿ: ಮರಿಯುಪೋಲ್‍ನಲ್ಲಿ ರಷ್ಯಾಗೆ ಶರಣಾದ ಉಕ್ರೇನ್ ಸೇನೆ
Yesterday's rainfall of 114.6 mm at #Bengaluru City #IMD is the highest 24 hour rainfall since August 15th 2017 when the city received 128.7 mm in 24 hours. The observatory has received a rainfall of 253.9 mm for the month making it the wettest May in at least 10 years!
— Bengaluru Weather (@BngWeather) May 18, 2022
ಮಳೆಯ ಪರಿಣಾಮ ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮಹಾಲಕ್ಷ್ಮೀ ಲೇಔಟ್ ಅತಿಹೆಚ್ಚು ಮನೆಗಳು ಹಾನಿಗೊಂಡಿದೆ. ಜೋಗುಪಾಳ್ಯ ಆನೆ ಪಾಳ್ಯ ಪೂರ್ವ ವಲಯದಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.