– ಕೆರೆಯಂತಾದ ಹೆಬ್ಬಾಳ ರಸ್ತೆ, ಕೋಡಿಗೆಹಳ್ಳಿ ಅಂಡರ್ ಪಾಸ್
ಬೆಂಗಳೂರು: ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ನಲುಗಿದ್ದು, ಎಲ್ಲಿ ನೋಡಿದರೂ ನೀರು, ನೀರು. ಅಂಡರ್ ಪಾಸ್‍ಗಳೆಲ್ಲ ನೀರಿನಿಂದ ತುಂಬಿದ್ದು, ರಸ್ತೆಗಳು ಸಹ ಕೆರೆಗಳಾಂತಾಗಿವೆ. ಇನ್ನು ಭಾರೀ ಮಳೆಗೆ ಬಹುತೇಕ ರಸ್ತೆಗಳಲ್ಲಿ ದೊಡ್ಡ ಗುಂಡಿಗಳೇ ಬಿದ್ದಿವೆ.
Advertisement
ರಾತ್ರಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ವರುಣ ಅಬ್ಬರಿಸಿ ಬೊಬ್ಬಿರಿದಿದ್ದು, ರಸ್ತೆ, ಅಂಡರ್ ಪಾಸ್‍ಗಳು ಕೆರೆಯಂತಾಗಿವೆ. ಅಂಡರ್‍ಪಾಸ್‍ನಲ್ಲಿ ನೀರು ನಿಂತು ಜನ ಪರದಾಡಿದ್ದಾರೆ. ಹೆಬ್ಬಾಳ ರಸ್ತೆ, ಕೋಡಿಗೆಹಳ್ಳಿ ಅಂಡರ್ ಪಾಸ್ ಕೆರೆಯಂತಾಗಿದ್ದವು. ರಾತ್ರೋರಾತ್ರಿ ಬಿಬಿಎಂಪಿ ಸಿಬ್ಬಂದಿಯಿಂದ ತೆರವು ಕಾರ್ಯ ನಡೆದಿದೆ. ಅಲ್ಲದೆ ರಾತ್ರಿಯಾಗಿದ್ದರಿಂದ ಹೆಚ್ಚಿನ ಜನ ಮಳೆಯಲ್ಲಿ ಸಿಲುಕಿಲ್ಲ. ಹೀಗಾಗಿ ಬೆಂಗಳೂರಿಗರು ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ
Advertisement
Advertisement
ಬೆಳಗ್ಗೆಯಷ್ಟರಲ್ಲಿ ಬಿಬಿಎಂಪಿ ಸಿಬ್ಬಂದಿ ಎಲ್ಲ ನೀರನ್ನು ಹೊರ ತೆಗೆದಿದ್ದು, ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಕೋಡಿಗೆಹಳ್ಳಿ ಅಂಡರ್‍ಪಾಸ್ ಹಾಗೂ ಮೆಜೆಸ್ಟಿಕ್ ರೈಲ್ವೆ ಅಂಡರ್‍ಪಾಸ್ ಗಳಲ್ಲಿ ಫುಲ್ ನೀರು ತುಂಬಿಕೊಂಡಿತ್ತು.