ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆ (Rain) ಕಂಟಕ ಎದುರಾದಂತಿದೆ. ರಾಜಧಾನಿಯಲ್ಲಿ ಸಂಜೆಯಿಂದ ಬಿಟ್ಟು, ಬಿಟ್ಟು ಧಾರಾಕಾರವಾಗಿ ಮಳೆ ಸುರಿದಿದ್ದು, ವಿವಿಧ ಜಿಲ್ಲೆಗಳಲ್ಲೂ ಮಳೆ ಅವಾಂತರ ಸೃಷ್ಟಿಸಿದೆ.
Advertisement
ನಗರದ ಮೆಜೆಸ್ಟಿಕ್, ಕೆಆರ್ ಪುರಂ, ಕೆಆರ್ ಸರ್ಕಲ್, ಕೆ.ಆರ್ ಮಾರ್ಕೆಟ್, ಬಸವನಗುಡಿ, ಶಿವಾಜಿನಗರ, ಎಂಜಿ ರೋಡ್, ರಾಜಾಜಿನಗರ, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು ಕೆರೆಯಂತಾಗಿವೆ. ವಾಹನ ಸವಾರರು ಪರದಾಡ್ತಿದ್ದಾರೆ. ವಾಹನಗಳಂತೂ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಹರೀಶ್ ಪೂಂಜಾ ಕೊಲೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್ – ಆರೋಪಿ ರಿಯಾಜ್ ವಶಕ್ಕೆ
Advertisement
Advertisement
ಹಲವೆಡೆ ಟ್ರಾಫಿಕ್ ಸಿಗ್ನಲ್ ಕೈಕೊಟ್ಟಿದೆ. ಹೀಗೆ ಮಳೆ ಎಡಬಿಡದೆ ಸುರಿದ್ರೆ ನಗರದ ಪ್ರತಿಷ್ಠಿತ ಏರಿಯಾಗಳೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಫಸ್ಟ್ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್ ಆಯ್ತು ವಿಶ್ವದ ದೊಡ್ಡ ವಿಮಾನ