ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ರಾತ್ರಿಯಿಡೀ ಭಾರೀ (Bengaluru Rains) ಮಳೆಯಾಗಿದೆ. ಮುಂಗಾರು ಆರಂಭದಲ್ಲೇ ರಾಜ್ಯದ ಹಲವೆಡೆ ಪ್ರವಾಹದ ಸ್ಥಿತಿ ಕಂಡುಬಂದಿದೆ.
ನಗರದ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮುಂಗಾರು ಅಬ್ಬರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಭವ್ಯ ನರಸಿಂಹಮೂರ್ತಿ ಈಗ ಭಾರತೀಯ ಸೇನೆಯ ಆಫೀಸರ್
Advertisement
Advertisement
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
Advertisement
ನಗರದಲ್ಲಿ ಕಳೆದ 24 ಗಂಟೆಯಲ್ಲಿ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: Exit Poll | ಎಕ್ಸಿಟ್ ಪೋಲ್ ಮೇಲೆ ನಂಬಿಕೆಯಿಲ್ಲ, ಬಿಜೆಪಿ 275 ಸ್ಥಾನಗಳನ್ನೂ ದಾಟಲ್ಲ: ಎಂ.ಬಿ ಪಾಟೀಲ್
Advertisement
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 7.8 ಸೆಂ.ಮೀ
ಹೊರಮಾವು – 7 ಸೆಂ.ಮೀ
ವಿದ್ಯಾಪೀಠ – 6.3 ಸೆಂ.ಮೀ
ಹಂಪಿನಗರ – 6.2 ಸೆಂ.ಮೀ
ಕೊಡಿಗೆಹಳ್ಳಿ – 6 ಸೆಂ.ಮೀ
ಹೇರೋಹಳ್ಳಿ – 5.9 ಸೆಂಮೀ
ದೊಡ್ಡನೆಕುಂದಿ – 5.8 ಸೆಂಮೀ
ಜಕ್ಕೂರು – 5.6 ಸೆಂ.ಮೀ
ನಾಗೇನಹಳ್ಳಿ – 5.3 ಸೆಂ.ಮೀ
ಯಲಹಂಕಾ – 5.3 ಸೆಂ.ಮೀ
RR ನಗರ – 5.2 ಸೆಂ.ಮೀ ಮಳೆಯಾಗಿದೆ.