ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ವರುಣನ ಆರ್ಭಟ ಜೋರಾಗಿದ್ದು, ಸಂಜೆಯಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
Advertisement
ಸಂಜೆ ಹೊತ್ತು ಏಕಾಏಕಿ ಪ್ರಾರಂಭವಾದ ಮಳೆ ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ತೆರಳುವವರಿಗೆ ಕಿರಿಕಿರಿ ಉಂಟುಮಾಡಿದೆ. ಮೆಜೆಸ್ಟಿಕ್, ಗಾಂಧೀನಗರ, ಚಾಮರಾಜಪೇಟೆ, ವಿಧಾನಸೌಧ, ಹಲಸೂರು, ಶೇಷಾದ್ರಿಪುರಂ, ಕೆಆರ್ ಸರ್ಕಲ್, ಕಾರ್ಪೋರೆಷನ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆ ಜೋರಾಗಿ ಸುರಿದಿದೆ. ಇದನ್ನೂ ಓದಿ: ರಾಜ್ಯದಲ್ಲಿಂದು 594 ಮಂದಿಗೆ ಕೊರೊನಾ – ಶೇ.3.14ಕ್ಕೆ ಪಾಸಿಟಿವಿಟಿ ದರ ಏರಿಕೆ
Advertisement
Advertisement
ಯಾದಗಿರಿ ಸಿಡಿಲಿಗೆ ಯುವತಿ ಸಾವು:
ಯಾದಗಿರಿಯಲ್ಲಿ ವರುಣನ ಆರ್ಭಟಕ್ಕೆ ಯುವತಿ ಬಲಿಯಾಗಿದ್ದಾಳೆ. ಸುರಪುರ ತಾಲೂಕಿನ ಮಲ್ಲಾ(ಬಿ) ಗ್ರಾಮದಲ್ಲಿ ಘಟನೆ ನಡೆದಿದ್ದು, ಜಮೀನಿನ ಕೆಲಸಕ್ಕೆ ತೆರಳಿದ್ದ ವಿದ್ಯಾ(20) ಸಿಡಿಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾಳೆ. ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಭಾರೀ ಮಳೆಗೆ ಕಿರದಳ್ಳಿ-ನಗನೂರು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಇದನ್ನೂ ಓದಿ: ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?
Advertisement
ಕೋಲಾರ ರೈತರ ಮೊಗದಲ್ಲಿ ಮಂದಹಾಸ:
ಜಿಲ್ಲೆಗೆ ಅಧಿಕೃತವಾಗಿ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ಹಲವೆಡೆ ಉತ್ತಮ ಮಳೆಯಾಗಿದೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆರಾಯ, ಇಂದು ಮರಳಿ ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜಿಲ್ಲೆಯ ಮಾಲೂರು, ಬಂಗಾರಪೇಟೆ, ಕೆಜಿಎಫ್ ತಾಲೂಕಿನ ಹಲವೆಡೆ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿವೆ.