– ಮುಂದಿನ 4 ದಿನ ರಾಜ್ಯದಲ್ಲಿ ಭಾರೀ ಮಳೆ
ಬೆಂಗಳೂರು: ನಗರದ ಹಲವೆಡೆ ತಡರಾತ್ರಿ ಭಾರೀ ಮಳೆ (Bengaluru Rain) ಸುರಿದು, ಪ್ರಮುಖ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ವಿವಿಧ ಪ್ರದೇಶಗಳಲ್ಲಿ 3.2 ಸೆಂ.ಮೀ.ವರೆಗೂ ಮಳೆಯಾಗಿದೆ ಎಂದು ತಿಳಿದುಬಂದಿದೆ.
ಮಳೆಯೊಂದಿಗೆ ಭಾರೀ ಗಾಳಿಗೆ ಅಲ್ಲಲ್ಲಿ ಅವಾಂತರಗಳೂ ಸಂಭವಿಸಿವೆ. ಬೃಹತ್ ಮರಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಈ ನಡುವೆ ನಿನ್ನೆ ರಾತ್ರಿ ಬಿದ್ದ ಮರಗಳನ್ನ ಈವರೆಗೂ ತೆರವು ಮಾಡದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಇಡೀ ಶಾಪ ಹಾಕಿದ್ದಾರೆ. ಇದನ್ನೂ ಓದಿ: Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

ಕಾರಿನ ಮೇಲೆ ಬಿದ್ದ ಬೃಹತ್ ಮರ; ಚಾಲಕ ಗ್ರೇಟ್ ಎಸ್ಕೇಪ್
ಇನ್ನೂ ನಿನ್ನೆ ಸಂಜೆ 6:10ರ ಸುಮಾರಿಗೆ ಮಳೆ ಸಂದರ್ಭದಲ್ಲಿ ಶೇಷಾದ್ರಿಪುರಂ ಕಾನೂನು ಕಾಲೇಜು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ 3 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಆದ್ರೆ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನ ಈವರೆಗೂ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ತೆರವು ಮಾಡಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಎಂಜಿ ರೋಡ್ ಬಳಿಯ ಶಾಂತಲಾ ರಸ್ತೆಯಲ್ಲಿ ಮುಖ್ಯರಸ್ತೆಯಲ್ಲೂ ಬೃಹತ್ ಗಾತ್ರದ ಮರ ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಇದನ್ನೂ ಓದಿ: ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ವಿಡಿಯೋ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್

ಮುಂದಿನ 4 ದಿನ ಭಾರೀ ಮಳೆ ಎಚ್ಚೆರಿಕೆ
ಇನ್ನೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳ ಕಾಲ ಅಂದ್ರೆ ಜುಲೈ 15ರ ವರೆಗೆ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋತ್ಯ ಮುಂಗಾರು ತೀವ್ರತೆ ಹೆಚ್ಚಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದ ಎಲ್ಲಾ ಜಿಲ್ಲೆಗಳಲ್ಲಿ ಸಾಧರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ
 


 
		 
		 
		 
		 
		
 
		 
		 
		 
		