ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು.
ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ ಹಲವಡೆ ವರುಣ ಅಬ್ಬರಿಸಿದ್ದಾನೆ. ಮಳೆಯ ಸೃಷ್ಟಿಸಿದ ಅವಾಂತಕ್ಕೆ ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿ ಮತ್ತು ಬೆಳ್ಳಂಡೂರ ನಿವಾಸಿಗಳು ಭಾರೀ ಸಮಸ್ಯೆ ಎದುರಿಸುವಂತಾಯಿತು. ಇಲ್ಲಿನ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಕಂಗಾಲಾದರು.
Advertisement
Advertisement
ರಾಜಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿರುವುದೇ ಮಳೆ ನೀರು ಮನೆಗಳಿಗೆ ನುಗ್ಗಲು ಕಾರಣ. ನೀರಿನ ರಭಸಕ್ಕೆ ಮನೆಗಳ ಗೋಡೆಗಳು ಬಿರುಕು ಬಿಡುವ ಆತಂಕ ಶುರಾವಗಿದೆ. ಉಳಿದಂತೆ ಕೆಲವು ಮನೆಗಳ ಮುಂದೆ ನಿಂತ ಕಾಲುದ್ದ ನೀರನ್ನು ಹೊರಹಾಕಲು ಮನೆಯ ಸದಸ್ಯರು ಹರಸಾಹಸ ಪಡುತ್ತಿದ್ದಾರೆ. ಇಷ್ಟೇಲ್ಲ ಅವಾಂತರ ಸೃಷ್ಟಿಯಾದರೂ ಬಿಬಿಎಂಪಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.
Advertisement
ಪ್ರಮೋದ್ ಲೇಔಟ್‍ನಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ರಸ್ತೆಯ ಮೇಲೆ ಮೊಣಕಾಲುದ್ದ ನೀರು ನಿಂತಿದ್ದರಿಂದ ವಾಹನ ಸವಾರರ ಪರದಾಡಿದರು.