ಬೆಂಗಳೂರು: ಭಾರೀ ಮಳೆಗೆ (Heavy Rain) ಕೋರಮಂಗಲದ ಒಳಾಂಗಣ ಸ್ಟೇಡಿಯಂ (Kormangala Indoor Stadium) ಆವರಣಕ್ಕೆ ನೀರು ನುಗ್ಗಿದ್ದು ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ (Asian Netball Championship) ಇಂದು ನಡೆಯಬೇಕಿದ್ದ ಎರಡು ಪಂದ್ಯಗಳು ಮುಂದೂಡಿಕೆಯಾಗಿದೆ.
ಭಾರೀ ಮಳೆಗೆ ರಾಜಕಾಲುವೆ ನೀರು ರಸ್ತೆ ಮೇಲೆ ಹರಿದು ಕ್ರೀಡಾಂಗಣದ ಆವರಣವನ್ನು ಪ್ರವೇಶಿಸಿದೆ. ನೀರು ನುಗ್ಗುವುದರ ಜೊತೆ ಬೆಳಗ್ಗೆ ವಿದ್ಯುತ್ ಸಮಸ್ಯೆ ಇದ್ದ ಕಾರಣ ಇಂದು ನಿಗದಿಯಾಗಿದ್ದ ಎರಡು ಪಂದ್ಯಗಳು ಗುರುವಾರಕ್ಕೆ ಮುಂದೂಡಿಕೆಯಾಗಿದೆ.
ಗೇಟ್‌ನಿಂದ ಕ್ರೀಡಾಂಗಣದವರೆಗೂ ನೀರು ನಿಂತಿದ್ದರಿಂದ ಹೋಟೆಲಿನಲ್ಲಿ ತಂಗಿದ್ದ ಆಟಗಾರರನ್ನು ಬಸ್ಸಿನಲ್ಲಿ ಕರೆತರಲು ಸಮಸ್ಯೆಯಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅವಾಂತರ – ಎಲ್ಲಿ ಏನಾಗಿದೆ?
13ನೇ ಆವೃತ್ತಿಯು ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನ ಅಕ್ಟೋಬರ್ 18 ರಂದು ಪ್ರಾರಂಭವಾಗಿ ಅಕ್ಟೋಬರ್ 27 ರಂದು ಮುಕ್ತಾಯಗೊಳ್ಳಲಿದೆ. ಒಟ್ಟು 14 ತಂಡಗಳ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಮಾಲ್ಡೀವ್ಸ್, ಸೌದಿ ಅರೇಬಿಯಾ, ಶ್ರೀಲಂಕಾ, ಮಲೇಷ್ಯಾ, ಫಿಲಿಪೈನ್ಸ್, ಭಾರತ, ಜಪಾನ್, ಸಿಂಗಾಪುರ, ಹಾಂಕಾಂಗ್, ಬ್ರೂನಿ, ಥಾಯ್ಲೆಂಡ್, ಚೈನೀಸ್ ತೈಪೆ, ಇರಾಕ್ ಬಹ್ರೇನ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ.