ಬೆಂಗಳೂರು: ಸಿಲಿಕಾನ್ ಸಿಟಿಯ ಹಲವೆಡೆ ಮಂಗಳವಾರವೂ ಧಾರಾಕಾರ ಮಳೆ(Rain) ಯಾಗಿದೆ. ಹೆಬ್ಬಾಳ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ ಸೇರಿ ನಗರದ ಹಲೆವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಮಲ್ಲೇಶ್ವರಂ ಸೆಂಟ್ರಲ್, ಮಂತ್ರಿಮಾಲ್ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಕೆರೆಯಂತಾದವು. ಮೆಜೆಸ್ಟಿಕ್, ಶಿವಾನಂದ ಸರ್ಕಲ್ ಸುತ್ತಮುತ್ತ ಕೂಡ ಭಾರೀ ಮಳೆಯಾಗಿದೆ. ಶಿವಾನಂದ ಸರ್ಕಲ್ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿಕೊಂಡಿತ್ತು. ಅಂಡರ್ ಪಾಸ್ ಕ್ಲೋಸ್ ಮಾಡಿಲ್ಲ, ಬ್ಯಾರಿಕೇಡ್ ಹಾಕಿಲ್ಲ. ಹೀಗಾಗಿ ವಾಹನಗಳು ಮಳೆ ನೀರಿನಲ್ಲಿ ಸಿಕ್ಕಿಕೊಂಡು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
Advertisement
Advertisement
ಕೆಆರ್ ಸರ್ಕಲ್ ನ ಅಂಡರ್ ಪಾಸ್ ನಲ್ಲಿ ಇಂದು ಕೂಡ ಮೂರು ಅಡಿಗೂ ಹಚ್ಚು ಮಳೆ ನೀರು ನಿಂತಿದೆ. ಅಂಡರ್ ಪಾಸ್ಗೆ ಈಗಾಗಲೇ ಬಿಬಿಎಂಪಿ ಬ್ಯಾರಿಕೇಡ್ ಹಾಕಿದೆ. ಆದರೆ ಅಧಿಕಾರಿಗಳು ಮಳೆ ನೀರು ಹೊರಹೊಗಲು ಸೂಕ್ತ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಅಂಡರ್ ಪಾಸ್ ನತ್ತ ಮಳೆ ನೀರು ಹರಿದು ಬರುತ್ತಿದೆ. ಇದನ್ನೂ ಓದಿ: ಕೊನೆಗೂ ಡಿಕೆಶಿಗೆ ಸಿಕ್ತು ಅದೃಷ್ಟದ ಮನೆ – ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ – ಯಾರಿಗೆ ಯಾವ ಮನೆ?
Advertisement
Advertisement
ಇನ್ನು ಜೆಪಿ ನಗರ, ಜಯನಗರ, ಕೋರಮಂಗಲ, ಲಾಲ್ಬಾಗ್, ಬಿಟಿಎಂ ಲೇಔಟ್, ಬನ್ನೇರುಘಟ್ಟ, ಬೇಗೂರು, ದೊಮಲೂರು, ಬನಶಂಕರಿ, ಬಸವನಗುಡಿ, ಬಿನ್ನಿಪೇಟೆ ಹಾಗೂ ಮೈಸೂರು ರೋಡ್ನಲ್ಲಿಯೂ ಹೆಚ್ಚಿನ ಮಳೆಯಾಗಿದೆ. ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ಮುಂಭಾಗದ ರಸ್ತೆ ಕೆರೆಯಂತಾಗಿದೆ. ಯಾವಾಗ ಮಳೆ ಬಂದ್ರೂ ಈ ರಸ್ತೆಯಲ್ಲಿ ನೀರು ನಿಲ್ಲುತ್ತೆ. ಜನಪ್ರತಿನಿಧಿಗಳ ನಿವಾಸಗಳ ಬಳಿಯೇ ರಸ್ತೆಯಲ್ಲಿ ನೀರು ನಿಂತಿರುವುದು ವಿಪರ್ಯಾಸವೇ ಸರಿ.
ಒಟ್ಟಿನಲ್ಲಿ ಗುಡುಗು ಸಹಿತ ಭಾರೀ ಮಳೆ ಎಚ್ಚರಿಕೆ ಹಿನ್ನೆಲೆಯಲ್ಲಿ ಚಾಲಕರು ಆತಂಕದಲ್ಲೇ ವಾಹನ ಸಂಚಾರ ಮಾಡುತ್ತಿದ್ದಾರೆ.