ಬೆಳಗಾವಿ: ಕಳೆದ ಮೂರುನಾಲ್ಕು ದಿನಗಳಿಂದ ಕುಂದಾನಗರಿಯಲ್ಲಿ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಮಗಳ ಮದುವೆಯ ಸಂಭ್ರಮ ಕಸಿದುಕೊಂಡಿದೆ.
ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಸುರಿದ ಬಾರಿ ಮಳೆ, ಗಾಳಿಗೆ ಚಂದ್ರಶೇಖರ್ ಹುಡೇದ್ ಅವರ ಮನೆ ಸೇರಿ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಕುಸಿದಿವೆ. ಈ ಪರಿಣಾಮ, ಏಪ್ರಿಲ್ 15ಕ್ಕೆ ಅದ್ಧೂರಿಯಾಗಿ ಮಗಳ ಮದುವೆಯನ್ನು ನಿಶ್ಚಯ ಮಾಡಿಕೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಇತ್ತ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮದುಮಗಳು ಕೂಡ ತಂದೆಯ ಮತ್ತು ಮನೆಯ ಪರಿಸ್ಥಿತಿ ಕಂಡು ಕಣ್ಣೀರು ಹಾಕುತ್ತಿದ್ದಾಳೆ. ಮಳೆಯಿಂದಾಗಿ ಐದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ಚಂದ್ರಶೇಖರ್ ಅವರ ಮನೆಯಲ್ಲಿ ಎಲ್ಲರೂ ಕುಳಿತು ಊಟ ಮಾಡುತ್ತಿದ್ದ ವೇಳೆಯಲ್ಲಿಯೇ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಘಟನೆಯಿಂದಾಗಿ ಅವರ ಬೆನ್ನು ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ವಿಚಾರ – 7ನೇ ರ‍್ಯಾಂಕ್ ಪಡೆದಿದ್ದ ಕಲಬುರಗಿ ಅಭ್ಯರ್ಥಿ ಸಿಐಡಿ ವಶಕ್ಕೆ
Advertisement
Advertisement
ಸಂಭ್ರಮ ಹೋಯ್ತು:
ಬೆಳಗಾವಿ ತಾಲೂಕಿನ ಅಲರವಾಡ ಗ್ರಾಮದಲ್ಲಿ ಚಂದ್ರಶೇಖರ ಹುಡೇದ್ ಎಂಬುವವರ ತಮ್ಮ ಒಬ್ಬಳೇ ಮಗಳಾದ ದೀಪಾ ಅವರನ್ನು ಬೆಳಗಾವಿ ತಾಲೂಕಿನ ಶಿಂದೋಳಿ ಗ್ರಾಮದ ನಾಗರಾಜ ತಿಗಡಿ ಎಂಬುವವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಏಪ್ರಿಲ್ 15ರಂದು ಶಿಂದೋಳಿ ಗ್ರಾಮದಲ್ಲಿ ಮದುವೆ ನಿಶ್ಚಯವಾಗಿತ್ತು. ಇತ್ತ ಬಡತನ ಹಿನ್ನೆಲೆಯಲ್ಲಿ ಕುಟುಂಬದವರು ಮಗಳ ಮದುವೆಗಾಗಿ ಚಂದ್ರಶೇಖರ ಟ್ರಜರಿ, ಪಾತ್ರೆಗಳು, ಟ್ರೇಲರಿಂಗ್ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ಇದರ ಜೊತೆಗೆ ಮದುವೆಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ತಂದಿಟ್ಟುಕೊಂಡಿದ್ದರು. ಆದರೆ ಅಕಾಲಿಕ ಮೆಳೆ ಮದುವೆ ಮನೆಯ ಸಂಭ್ರಮ ಕಸಿದುಕೊಂಡಿದ್ದು ಒಂದೆಡೆಯಾದರೆ ಸಾಲ ಮಾಡಿ ಕಟ್ಟಿಕೊಂಡಿದ್ದ ಮನೆಯೂ ಸಂಪೂರ್ಣವಾಗಿ ಹಾಳಾಗಿದೆ. ಪರಿಣಾಮ ಮನೆಯಲ್ಲಿ ಅಡುಗೆ ಬೇಕಾದ ಸಾಮಗ್ರಿಗಳನ್ನು ಹಾಳಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿಯವರು ಗೊಂದಲ ಮೂಡಿಸುವ ಕೆಲಸ ಮಾಡಬಾರದು: ಬಿಎಸ್‍ವೈ
ಮಗಳ ಮದುವೆ ಮಾಡಬೇಕೋ ಅಥವಾ ಮನೆಯ ಸ್ವಚ್ಚ ಮಾಡಬೇಕೋ ಎಂಬ ದುಗುಡದಲ್ಲಿದ್ದಾರೆ. ಸಾಲ ಮಾಡಿ ಮಗಳ ಮದುವೆಗೆ ಖರ್ಚು ಮಾಡಿದ ಹಣವೂ ನೀರಿನಲ್ಲಿ ಹೋಮ್ ಮಾಡಿದ್ದಂತಾಗಿದೆ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳು ಸಂತ್ರಸ್ತರ ಕುಟುಂಬಕ್ಕೆ ಆಶ್ರಯವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.