ಬೀದರ್: ತಡರಾತ್ರಿ ಧಾರಾಕಾರ ಮಳೆಗೆ (Rain) ಸಣ್ಣ ಕೆರೆ ಒಡೆದು ಅವಾಂತರ ಸೃಷ್ಟಿಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basavakalyan) ತಾಲೂಕಿನ ಅಟ್ಟೂರು ಗ್ರಾಮದ ಬಳಿ ನಡೆದಿದೆ
ಧಾರಾಕಾರ ಮಳೆಗೆ ಗ್ರಾಮದ ಸಣ್ಣ ಕೆರೆ (Lake) ಭರ್ತಿಯಾಗಿ ಒಡೆದ ಪರಿಣಾಮ ಕೆರೆಯಲ್ಲಿದ್ದ ಬಹುತೇಕ ನೀರು ಖಾಲಿ ಖಾಲಿಯಾಗಿದೆ. ಕೆರೆಯ ಕೆಳಗಿದ್ದ ಜಮೀನುಗಳಿಗೆ ನೀರು ನುಗ್ಗಿದ್ದು 20% ರಷ್ಟು ಬೆಳೆ ಹಾನಿಯಾಗಿದೆ. ಇದನ್ನೂ ಓದಿ: ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು, ಸಚಿವರಾಗಿ ಪವನ್ ಕಲ್ಯಾಣ್ ಪ್ರಮಾಣವಚನ ಸ್ವೀಕಾರ
ಮಳೆಗೆ ಗ್ರಾಮದ ಹಲವು ರೈತರ ಜಮೀನಿನಲ್ಲಿದ್ದ ಬಾವಿಗಳು ತುಂಬಿದ್ದು ಕೆರೆ ನೀರಿನ ರಭಸಕ್ಕೆ ಅಟ್ಟೂರು ಹಾಗೂ ಅಟ್ಟೂರು ತಾಂಡಾದ ಮಧ್ಯೆ ಇರುವ ರಸ್ತೆ ಸೇತುವೆ ಕೊಚ್ಚಿ ಹೋಗಿದೆ. ಕೋಹಿನೂರು ಹೊಬಳಿಯಲ್ಲೇ ತಡರಾತ್ರಿ 180 ಮಿಲಿ ಮೀಟರ್ ಮಳೆಯಾಗಿದೆ.