ಬಳ್ಳಾರಿ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಭರ್ಜರಿ ಮಳೆಯಾಗಿದ್ದು (Rain), ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ಭಾರೀ ಮಳೆಯ ಪರಿಣಾಮ ಸಂಡೂರಿನ (Sandur) ಗಣಿ ಪ್ರದೇಶದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆ ನೀರಿನಲ್ಲಿ ನೂರಾರು ಗಣಿ ಲಾರಿಗಳು (Mining Lorry) ಭಾಗಶಃ ಮುಳುಗಡೆಯಾಗಿದೆ. ಲಾರಿಗಳು ಜಲಾವೃತಗೊಂಡ ಹಿನ್ನೆಲೆ ಇಡೀ ರಾತ್ರಿ ಚಾಲಕರು ಪರದಾಡಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಬೆಂಗಳೂರಿಗೆ ಬರಲಿದ್ದಾರೆ ಭಾರತ ವಿರೋಧಿ ಮಾಲ್ಡೀವ್ಸ್ ಅಧ್ಯಕ್ಷ
ಸಂಡೂರಿನ ನಂದಿಹಳ್ಳಿ ವಾಶಿಂಗ್ ಪ್ಲಾಂಟ್ ಬಳಿ ಮಳೆ ಅವಾಂತರಕ್ಕೆ ಲಾರಿ ಚಾಲಕರು ನಲುಗಿ ಹೋಗಿದ್ದಾರೆ. ಕುಮಾರಸ್ವಾಮಿ ಬೆಟ್ಟದಲ್ಲಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: ಚಲಿಸುತ್ತಿದ ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು