ವಿಜಯಪುರ: ಬಿಸಿಲನಾಡು ವಿಜಯಪುರ ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.
ವಿಜಯಪುರದ ತಿಕೋಟ, ಕನಮಡಿ ಗ್ರಾಮಗಳು ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆ ಕೂಡ ಆಗಿದೆ. ಬರೋಬ್ಬರಿ ಅರ್ಧ ಗಂಟೆಗೂ ಹೆಚ್ಚು ಸುರಿದ ಮಳೆಯಿಂದ ಬಿಸಿಲನಾಡ ಜನರು ಫುಲ್ ಖುಷಿಯಾಗಿದ್ದಾರೆ. ಉರಿ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನತೆಗೆ ವರುಣ ತಂಪೆರೆದಂತಾಗಿದೆ. ಕೆಲ ವರ್ಷಗಳ ನಂತರ ಜಿಲ್ಲೆಯಲ್ಲಿ ಆಲಿಕಲ್ಲು ಮಳೆ ಆಗಿದ್ದು, ಜನರು ವರುಣನಿಗೆ ಉಘೇ… ಉಘೇ… ಎಂದಿದ್ದಾರೆ.
Advertisement
Advertisement
ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಹಾವೇರಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆದಿದ್ದನು. ಕಳೆದ ಶುಕ್ರವಾರ ಸಂಜೆ ವೇಳೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿತ್ತು. ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನರಿಗೆ ಆಲಿಕಲ್ಲು ಮಳೆ ಕೊಂಚ ರಿಲ್ಯಾಕ್ಸ್ ನೀಡಿತ್ತು. ಮಳೆರಾಯ ತನ್ನೊಂದಿಗೆ ಆಲಿಕಲ್ಲುಗಳನ್ನ ಸುರಿಸಿದ್ದು, ಜಿಲ್ಲೆಯ ಜನರಿಗೆ ಖುಷಿ ನೀಡಿದ್ದನು. ಸೂರ್ಯನ ತಾಪದಿಂದ ಬೇಸತ್ತು ಆಕಾಶ ನೋಡುತ್ತಿದ್ದ ಜನರಿಗೆ ಹದಿನೈದು ನಿಮಿಷಗಳ ಕಾಲ ಸುರಿದ ಮಳೆ ತಂಪು ತಂಪು ಕೂಲ್ ಕೂಲ್ ಎನ್ನುವ ವಾತಾವರಣ ಸೃಷ್ಟಿಸಿತ್ತು.