ಕಾರವಾರ/ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 63 ಮಿ.ಮೀ ಮಳೆ ಆಗಿದೆ.
ಮಳೆಯಿಂದಾಗಿ ಕಾರವಾರ ನಗರದ ಮಹದೇವ ನಗರ, ಪದ್ಮನಾಭನಗರ ಸೇರಿದಂತೆ ತಗ್ಗು ಪ್ರದೇಶದಲ್ಲಿ ಮನೆಗಳು ಹಾಗೂ ರಸ್ತೆಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಂಡಿದೆ.
Advertisement
ಸ್ಥಳಕ್ಕೆ ನಗರಸಭಾ ಆಯುಕ್ತ ಎಸ್. ಯೋಗೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಕ್ಷಣದಲ್ಲೇ ನೀರು ತೆರವು ಕಾರ್ಯಾಚರಣೆಗೆ ಸೂಚನೆ ನೀಡಿದ್ದಾರೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಇನ್ನೆರಡು ದಿನ ಹೆಚ್ವಿನ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
Advertisement
ಇತ್ತ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದ್ದು, ಕೃಷ್ಣಾ, ವೇದಗಂಗಾ ಹಾಗೂ ವೇದಗಂಗಾ ನದಿ ನೀರಿನ ಒಳ ಹರಿವಿನಲ್ಲಿ ಇಳಿಕೆಯಾಗಿದೆ. ಮಳೆಯಿಂದ ಮುಳುಗಡೆಯಾಗಿದ್ದ 6 ಸೇತುವೆಗಳ ಪೈಕಿ 4 ಸೇತುವೆಗಳು ಸಂಚಾರ ಮುಕ್ತವಾಗಿದೆ.
Advertisement
ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಸಂಚಾರ ಮುಕ್ತವಾಗಿದೆ. ಕಾರದಗಾ- ಭೋಜ, ಭೋಜವಾಡಿ- ಕುನ್ನೂರು, ಸಿದ್ನಾಳ – ಅಕ್ಕೋಳ, ಜತ್ರಾಟ – ಭಿವಶಿ ಗ್ರಾಮಗಳ ಸೇತುವೆಗಳು ಸಂಚಾರ ಮುಕ್ತವಾಗಿದೆ. 2 ಸೇತುವೆಗಳ ಜಲಾವೃತ ಸ್ಥಿತಿ ಮುಂದುವರಿಕೆ ಆಗಿದೆ.
ಕೃಷ್ಣಾ ನದಿಯ ಕಲ್ಲೋಳ – ಯಡೂರು ಹಾಗೂ ದೂದಗಂಗಾ ನದಿಯ ಮಲಿಕವಾಡ – ದತ್ತವಾಡ ಸೇತುವೆ ಜಲಾವೃತವಾಗಿರುವ ಕಾರಣ ವಾಹನ ಸವಾರರು ಪರ್ಯಾಯ ಮಾರ್ಗದಿಂದ ಸಂಚಾರ ಮಾಡುತ್ತಿದ್ದಾರೆ.