ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನಾದ್ಯಂತ ಶನಿವಾರ ಭಾರೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ರೆಕ್ಕೆಪುಟ್ಟಿ ಹಳ್ಳ ತುಂಬಿ ಹರಿಯುತ್ತಿದ್ದು, ಹುನಗುಂದದ ಬೇಕಮಲದಿನ್ನಿ ಗ್ರಾಮಕ್ಕೆ ತೆರಳುವ ರಸ್ತೆ ಜಲಾವೃತವಾಗಿದೆ.
ಮಳೆಗೆ ರಸ್ತೆ ಜಲಾವೃತವಾಗಿದ್ದ ಕಾರಣಕ್ಕೆ ಬಸ್ಸೊಂದು ರಸ್ತೆಯ ಒಂದು ಬದಿಯಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಪ್ರಯಾಣಿಕರು ನೀರಲ್ಲೇ ನಡೆದುಕೊಂಡು ಹೋಗಬೇಕಾಯ್ತು. ಬೆಳಗಾವಿಯ ಚಾಂದಶಿರದವಾಡ ಗ್ರಾಮದಲ್ಲಿ ದೂಧ್‍ಗಂಗಾ ನದಿ ಪ್ರವಾಹದಿಂದ ಉಕ್ಕಿ ಹರೀತಿದ್ದು, ನದಿಯಲ್ಲಿ ಮೀನು ಹಿಡಿಯಲು ಹೋದ 14 ವರ್ಷದ ಸಂಸ್ಕಾರ ಪವಾರ ನೀರುಪಾಲಾಗಿದ್ದಾನೆ.
Advertisement
Advertisement
ಇನ್ನೊಂದೆಡೆ ಈಶಾನ್ಯ ಭಾರತದ ರಾಜ್ಯಗಳು ಕೂಡ ಭಾರೀ ಪ್ರವಾಹಕ್ಕೆ ನಲುಗಿದೆ. ಅಸ್ಸಾಂ ರಾಜ್ಯವೊಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಬ್ರಹ್ಮಪುತ್ರ ನದಿಯಲ್ಲಿನ ಪ್ರವಾಹದಿಂದಾಗಿ ಇಲ್ಲಿನ ಮೋರಿಗ್ವಾನ್ ಜಿಲ್ಲೆಯ ತೆಲಂಗುರಿ ಗ್ರಾಮದಲ್ಲಿ ಶಾಲೆಯ ಕಟ್ಟಡವೇ ನೀರುಪಾಲಾಗಿದೆ. ಈವರೆಗೆ 15 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
Advertisement
#WATCH: Building of a Primary School in Tengaguri area of Morigaon district collapsed due to the increasing water in the Brahmaputra River flowing through the region, yesterday. #Assam pic.twitter.com/AYoEUydJup
— ANI (@ANI) July 13, 2019
Advertisement
ಅಲ್ಲದೆ ನೇಪಾಳದಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ 40 ಜನ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದಾಗಿ 20ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ನೇಪಾಳದ 21 ಜಿಲ್ಲೆಗಳಿಗಲ್ಲಿ ತೀವ್ರ ಹಾನಿ ಸಂಭವಿಸಿದೆ. ರಾಜಧಾನಿ ಕಠ್ಮಂಡುವಿನ ರಸ್ತೆಗಳೆಲ್ಲಾ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿವೆ.