* ಬೆಂಗಳೂರಿಗೆ 2-3 ದಿನ ಯೆಲ್ಲೋ ಅಲರ್ಟ್ ಘೋಷಣೆ
* 65-110 ಎಂಎಂ ಮಳೆ ಸಾಧ್ಯತೆ
* ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಹಾಮಳೆಯ ಎಚ್ಚರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರಿನ (Mungaaru Rain) ಮೇಘಸ್ಫೋಟದ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ (Bengaluru) ವರುಣನ ಆರ್ಭಟ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ಕೊಟ್ಟಿದೆ.
Advertisement
ದೇಶದಲ್ಲಿ ಮುಂದಿನ 4 ವಾರ ಮುಂಗಾರು ದುರ್ಬಲಗೊಳ್ಳಬಹುದು ಎಂದು ಮೂರು ದಿನಗಳ ಹಿಂದಷ್ಟೇ ಸ್ಕೈಮೆಟ್ ಅಂದಾಜಿಸಿತ್ತು. ಆದ್ರೆ ಇದಕ್ಕೆ ವ್ಯತಿರಿಕ್ತ ವರದಿಯನ್ನ ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಮುಂದಿನ ಮೂರು ದಿನಗಳಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿರಲಿದೆ. ಕರ್ನಾಟಕ ಸೇರಿ ದೇಶದ ಬಹುತೇಕ ಭಾಗಗಳಲ್ಲಿ ಭಾನುವಾರದಿಂದ ಭಾರೀ ಮಳೆಯಾಗಲಿದೆ ಎಂದು IMD ತಿಳಿಸಿದೆ.
Advertisement
ಇದೇ ಜೂನ್ 18ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜೂನ್ 18 ರಂದು ಮತ್ತು 19ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್ ತೀರದಲ್ಲಿ ಅಲ್ಲೋಲ ಕಲ್ಲೋಲ
Advertisement
Advertisement
ಜೂನ್ 19ರಂದು ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಹೆಚ್ಚಿನ ಮಳೆಯಾಗಲಿದ್ದು, ಅಲ್ಲಿಯೂ ಯೆಲ್ಲೋ ಅಲರ್ಟ್ ಪ್ರಕಟಿಸಿದೆ. ಗದಗ, ವಿಜಯನಗರ, ಬೆಳಗಾವಿ ಭಾಗಕ್ಕೆ ಮುಂಗಾರು ಮಾರುತಗಳು ವ್ಯಾಪಿಸಿದ್ದು, ಚಂಡಮಾರುತದ ಪರಿಣಾಮಗಳು ಕಾಣುತ್ತಿಲ್ಲ. ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಜುಲೈ 2ನೇ ವಾರದವರೆಗೂ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ.
ಒಂದುಕಡೆ ಬರದ ಭೀತಿಯಲ್ಲಿರುವ ಕರ್ನಾಟಕಕ್ಕೆ ಪ್ರಬಲ ಮುಂಗಾರು ಖುಷಿಯ ವಿಚಾರವೇ. ಆದರೆ ಬೆಂಗಳೂರಿನಲ್ಲಿ ಮಹಾ ಮಳೆಗೆ ಸಜ್ಜಾಗದೇ ಇರೋದ್ರಿಂದ ಮಳೆ ಅಂದ್ರೆ ಆತಂಕ ಪಡುವ ಪರಿಸ್ಥಿತಿಯೇ ಹೆಚ್ಚಾಗಿದೆ. ಇದನ್ನೂ ಓದಿ: Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ