ಬೆಂಗಳೂರು: ಅಕ್ಟೋಬರ್ 17ರವರೆಗೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಕ್ಟೋಬರ್ 17ರವರೆಗೆ ಭಾರೀ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರಿನಲ್ಲಿ ಭರ್ಜರಿ ಮಳೆ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ. ಮಳೆಯಿಂದ ಹಾನಿಯಾದರೆ 6 ಓಆಖಈ ತಂಡ ಸಿದ್ಧತೆ ನಡೆಸಿದೆ. ಹೀಗಾಗಿ ಹವಾಮಾನ ಇಲಾಖೆ ಈ ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಎರಡು ಗಂಟೆಗಳ ಕಾಲ ಧಾರಕಾರವಾಗಿ ಮಳೆ ಸುರಿದಿದೆ. ನಗರದ್ಯಾಂತ ತಗ್ಗು ಪ್ರದೇಶಗಳಲ್ಲಿ ಅಲ್ಲಲ್ಲಿ ನೀರು ನಿಂತಿದೆ. ನಿನ್ನೆ ಸಂಜೆ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ, ಮಧ್ಯರಾತ್ರಿ ಮತ್ತೆ ಮಳೆಯಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು
ಮಧ್ಯ ರಾತ್ರಿಯಿಂದ ಧಾರಕಾರವಾಗಿ ಸುರಿದ ಮಳೆಗೆ ಬೆಂಗಳೂರಲ್ಲಿ ಹಲವೆಡೆ ಹಾನಿಯಾಗಿದೆ. ಲಕ್ಷ್ಮೀನಾರಾಯಣ ಪುರ, ಬಸವೇಶ್ವರ ನಗರ, ಗಾಯತ್ರಿ ನಗರ 3 ಕಡೆ ಮನೆಗಳಿಗೆ ನೀರು ನುಗ್ಗಿದೆ.ಆರ್ ಆರ್ ನಗರ ಐಡಿಯಲ್ ಹೋಮ್ಸ್ (ಅಕ್ಕಮಹಾದೇವಿ ಕನ್ವೆನ್ಷನ್ ಹಾಲ್ ಬಳಿ), ಪೀನ್ಯ ವಾರ್ಡ್ ನಂ. 38. 4ನೇ ಬ್ಲಾಕ್‍ನಲ್ಲಿ ಎರಡು ಕಡೆ ಮನೆಗಳಿಗೆ ನೀರು ನುಗ್ಗಿದೆ. ಚಿಕ್ಕಸಂದ್ರ ಕೆರೆ ಏರಿಯಾ, ಗುಂಡಪ್ಪ ಲೇಔಟ್, ರಾಯಲ್ ಎನ್ಕ್ಲೇವ್, ಬಿಟಿಎಸ್ ಲೇಔಟ್ ದಾಸರಹಳ್ಳಿಯಲ್ಲಿ ಡ್ರೈನೇಜ್ ನೀರು ತುಂಬಿ ಅವಾಂತರವಾಗಿದೆ. ಇದನ್ನೂ ಓದಿ: ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ಇನ್ನಿಲ್ಲ
ನಿನ್ನೆ ರಾತ್ರಿಯಿಡಿ ಸುರಿದ ಮಳೆಗೆ ರಸ್ತೆಯಲ್ಲೇ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಪರದಾಟ ಮಾಡುವಂತಾಗಿದೆ. ಗಾಯಿತ್ರಿನಗರ ಪಾರ್ಕ್‍ನಲ್ಲಿ ಬೃಹತಾಕಾರದ ಮರ ಧರೆಗೆ ಉರುಳಿದೆ. ಪಾರ್ಕ್‍ನಲ್ಲಿ ಮಳೆ ಬಂದಾಗ ಕೂರಲು ವ್ಯವಸ್ಥೆ ಮಾಡಿರುವ ಎಂಚಿನ ಮನೆ ಸ್ಪೇಸ್ ಮೇಲೆ ಮರ ಬಿದ್ದಿದೆ.