ಉಡುಪಿ: ಜಿಲ್ಲೆಯಲ್ಲಿ ಬಿಟ್ಟುಬಿಡದೆ ಮಳೆಯಾಗುತ್ತಿದೆ. ಮುಂದಿನ ಮೂರು ದಿನ ಬಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಪ್ರವಾಸಿ ತಾಣಗಳಿಗೆ ನದಿ -ಸಮುದ್ರ ಪಾತ್ರಗಳಿಗೆ ನಿಷೇಧವಿದ್ದರೂ ಜನ ನಿಯಮಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಚಂಡಮಾರುತ ವಾಯುಭಾರ ಕುಸಿತದ ಜೊತೆ ಪೂರ್ವ ಮುಂಗಾರು ಮಳೆ ಅಬ್ಬರ ಶುರು ಮಾಡಿದೆ. ಜಿಲ್ಲಾಡಳಿತ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಪ್ರವಾಸಿಗರಿಗೆ ನಿಯಮಗಳನ್ನು ಜಾರಿಗೊಳಿಸಿದೆ. ನದಿ ಸಮುದ್ರ ಪಾತ್ರದಲ್ಲಿ ಓಡಾಡಬಾರದು ನೀರಿಗೆ ಇಳಿಯಬಾರದು ಎಂಬ ಸೂಚನೆ ನೀಡಿದೆ. ಇದನ್ನೂ ಓದಿ: ಕೊಡಗಿನಲ್ಲಿ ಮಳೆ ಆರ್ಭಟ – ಮಹಾವಿದ್ಯಾಲಯಗಳಿಗೆ 2 ದಿನ ರಜೆ ಘೋಷಣೆ
ಉಡುಪಿಯ ಕಾಪು ಬೀಚಿನಲ್ಲಿ ಕೂಡ ಕಟ್ಟೆಚ್ಚರವಹಿಸಲಾಗಿದೆ. ಸಮುದ್ರ ತೀರಕ್ಕೆ ದೀಪ ಸ್ತಂಭದ ಕೆಳಭಾಗದಲ್ಲಿರುವ ಬಂಡೆ ಮೇಲೆ ಹತ್ತಬಾರದು, ಮೋಜು-ಮಸ್ತಿ ಮಾಡಬಾರದು ಎಂಬ ನಿಯಮವಿದೆ. ನಿಯಮವನ್ನ ಮೀರಿ ಜನ ಬಂಡೆ ಹತ್ತಿ ಸಮುದ್ರದ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: Kolar | ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಕಾರು ಅಪಘಾತ – ತಾಯಿ ಸಾವು, ಮಗ ಗಂಭೀರ
ಇಡೀ ವರ್ಷದಲ್ಲಿ ಏಪ್ರಿಲ್, ಮೇ ತಿಂಗಳು ಪ್ರವಾಸಿಗರ ಆಗಮನವಾಗುತ್ತದೆ. ಮೇ ತಿಂಗಳಲ್ಲಿ ಮಳೆ ಶುರುವಾಗಿರುವ ಕಾರಣ ಪ್ರವಾಸಿಗರಿಗೆ ರಜೆಯನ್ನು ಎಂಜಾಯ್ ಮಾಡಲು ಸಾಧ್ಯವಾಗಿಲ್ಲ. ಟೂರಿಸ್ಟ್‌ಗಳನ್ನೇ ನಂಬಿರುವ ವ್ಯಾಪಾರಿಗಳಿಗೂ ಮಳೆ ನಷ್ಟ ತಂದಿದೆ. ಇದನ್ನೂ ಓದಿ: ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ 3ನೇ ವ್ಯಕ್ತಿಯ ಪಾತ್ರವಿಲ್ಲ – ಮೋದಿ
ಮೂರು ನಾಲ್ಕು ದಿನ ವಿಪರೀತ ಮಳೆ ಬೀಳಲಿರುವುದರಿಂದ ನೀರಿಗೆ ಇಳಿದು ಈಜಾಡುವುದು ಅಪಾಯಕಾರಿ. ಬೀಚ್ ಪ್ರವಾಸದ ಪ್ಲ್ಯಾನ್ ಮಾಡಿದವರು ದಡದಲ್ಲಿ ವಿಹರಿಸಿ ಸಮುದ್ರವನ್ನು ನೋಡುವ ಪ್ಲ್ಯಾನ್ ಮಾಡಬಹುದು. ಇದನ್ನೂ ಓದಿ: ಕೆಸಿಇಟಿ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಮಂತ್ ರಾಜ್ಯಕ್ಕೆ 4ನೇ ರ‍್ಯಾಂಕ್