ಲಕ್ನೋ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರಪ್ರದೇಶದ (Uttar Pradesh) ಸುಮಾರು 10 ಜಿಲ್ಲೆಗಳಲ್ಲಿ ಶಾಲೆಗಳನ್ನು (Schools) ಬಂದ್ ಮಾಡಲಾಗಿದೆ. ಗುರುಗ್ರಾಮದಲ್ಲಿರುವ ಖಾಸಗಿ (Private Company) ಕಂಪನಿಗಳು ಉದ್ಯೋಗಿಗಳಿಗೆ (Employee) ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.
Advertisement
ಉತ್ತರಪ್ರದೇಶದ ಕೆಲ ಭಾಗಗಳಲ್ಲಿ ಭಾರೀ ಮಳೆಯಿಂದಾಗಿ (Heavy Rain) ಶಾಲೆ ಮುಚ್ಚಲಾಗಿದೆ. ಸಿಡಿಲು ಬಡಿದು ಗೋಡೆ ಕುಸಿದ ಘಟನೆಯಲ್ಲಿ 13 ಜನ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ
Advertisement
Advertisement
ದೆಹಲಿಯಲ್ಲೂ (NewDelhi) ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ (Rain Floods Delhi Roads). ಪ್ರಮುಖ ರಸ್ತೆಗಳಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆ (Traffic Problem) ನಿಯಂತ್ರಿಸುವಂತೆ ಸಹಾಯವಾಣಿಗೆ (HelpLine) ಕರೆಗಳು ಬರಲಾರಂಭಿಸಿವೆ. ರಕ್ಷಣಾತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅಲ್ಲಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿವೆ.