ಬೆಂಗಳೂರು: ನಿನ್ನೆ ಮೊನ್ನೆ ಮಳೆಯ ಅವಾಂತರಗಳಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಬಿಬಿಎಂಪಿ ಸಂಪೂರ್ಣವಾಗಿ ಎಚ್ಚೆತ್ತಿಲ್ಲ. ಈ ಮಧ್ಯೆ, ಸತತ ನಾಲ್ಕನೇ ದಿನವೂ ಸಂಜೆ ಮಳೆಗೆ ನಗರವು ತತ್ತರಿಸಿದೆ.
Advertisement
ಧೋ ಎಂದು ಒಂದೇ ಸಮನೆ ಸುರಿದ ಮಳೆಯಿಂದ ನಗರದ ರಸ್ತೆಗಳೆಲ್ಲಾ ಸಂಪೂರ್ಣ ಜಲಮಯವಾಗಿ ವಾಹನ ಸವಾರರು ಪರದಾಡಿದ್ದಾರೆ. ವಸಂತನಗರದ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ನಿಂತು, ವಾಹನಗಳು ಕೆಟ್ಟು ನಿಂತಿವೆ. ಎಂಜಿ ರೋಡ್, ಶಾಂತಿನಗರ, ಹಲಸೂರು, ಶಿವಾಜಿನಗರ ಸೇರಿ ಹಲವೆಡೆ ಭಾರೀ ಮಳೆ ಆಗಿದ್ದು, ತಗ್ಗು ಪ್ರದೇಶ ಮನೆಗಳಿಗೆ ಇವತ್ತು ನೀರು ನುಗ್ಗಿ, ಜನ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಈ ಕಾಂಗ್ರೆಸ್‍ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು: ನಂಜೇಗೌಡ
Advertisement
Advertisement
ಭಾರೀ ಜನಾಕ್ರೋಶದ ನಂತರ ಮಳೆ ನೀರು ನುಗ್ಗಿದ್ದ 89 ಮನೆಗಳ ಮಾಲೀಕರಿಗೆ 10 ಸಾವಿರ ರೂ. ಪರಿಹಾರ ನೀಡಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರು ಮಾತ್ರವಲ್ಲದೇ, ಹತ್ತಾರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಕೋಲಾರದ ಗೂರುಗೆಪಲ್ಲಿಯಲ್ಲಿ ಭಾರೀ ಮಳೆ ಹಲವು ಮನೆ, ಕೊಟ್ಟಿಗೆಗಳ ಮೇಲ್ಛಾವಣಿ ಹಾರಿದೆ. ಇದನ್ನೂ ಓದಿ: ಪಾಲಕ್ಕಾಡ್‍ನಲ್ಲಿ RSS ಮುಖಂಡ ಹತ್ಯೆ
Advertisement
ಈ ನಡುವೆ ಬೆಂಗಳೂರಿನ ವೈಟ್‍ಫೀಲ್ಡ್ ಭಾಗದಲ್ಲಿ ಅಂಡರ್ ಗ್ರೌಂಡ್ ಕೇಬಲಿಂಗ್ ಸಲುವಾಗಿ 6 ದಿನ ವಿದ್ಯುತ್ ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಗದ್ದೆಗಳಿಗೆಲ್ಲಾ ನೀರು ನುಗ್ಗಿ ಅಪಾರ ಬೆಳೆಹಾನಿ ಸಂಭವಿಸಿದೆ. ಹಾವೇರಿಯಲ್ಲಿ ಸಿಡಿಲು ಹೊಡೆದು ತೆಂಗಿನ ಮರಧಗಧಗಿಸಿದೆ. ಶಿವಮೊಗ್ಗ, ಗದಗ, ಹಾಸನ ಜಿಲ್ಲೆಗಳಲ್ಲಿಯೂ ಭಾರೀ ಮಳೆ ಆಗಿದೆ. ನಾಳೆಯೂ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.