ಉಡುಪಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಕಳೆದ ಹತ್ತು ದಿನಗಳಲ್ಲಿ 30 ಕೋಟಿ ರೂ.ನಷ್ಟು ಆಸ್ತಿ ನಷ್ಟವಾಗಿದೆ.
ಜಿಲ್ಲೆಯಲ್ಲಿ ಜುಲೈ 405 ಮಿ.ಮೀ ವಾಡಿಕೆ ಮಳೆಯಾಗಿದ್ದು, ಇದುವರೆಗೆ 1,050 ಮಿ.ಮೀ ಮಳೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ 750 ಎಂಎಲ್ ದಾಖಲೆ ಮಳೆಯಾಗಿದೆ. ಒಟ್ಟು 250 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿಮೀ. ಹಾಗೂ ಗ್ರಾಮೀಣ ಪ್ರದೇಶದ 685 ಕಿಮೀ. ನಷ್ಟು ರಸ್ತೆ ಮಳೆಗೆ ಹಾನಿಯಾಗಿದೆ. ಇದನ್ನೂ ಓದಿ: ‘ರೋಡೀಸ್’ ರಿಯಾಲಿಟಿ ಶೋ ಗೆದ್ದ ಬೆಂಗಳೂರಿನ ಹುಡುಗಿ : ಗೆಲುವು ಸುಲಭದ್ದಲ್ಲ ಎಂದ ನಂದಿನಿ
Advertisement
Advertisement
ಜಿಲ್ಲೆ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ 7.5 ಕಿಮೀ. ಮುಖ್ಯರಸ್ತೆ ಹಾಳಾಗಿದೆ. 13 ಸೇತುವೆಗಳು ಹಾನಿಯಾಗಿದೆ. 1,515 ವಿದ್ಯುತ್ ಕಂಬಗಳು ಬಿದ್ದುಹೋಗಿದ್ದು, 47 ಕಿಮೀ. ನಷ್ಟು ವಿದ್ಯುತ್ ತಂತಿಗಳು ಹಾಳಾಗಿದೆ. 64 ಮನೆಗಳು ಭಾಗಶಃ ಹಾನಿಯಾಗಿದೆ. ಕಳೆದ 10 ದಿನಗಳಲ್ಲಿ 30 ಕೋಟಿ ರೂ.ಗಳಷ್ಟು ಆಸ್ತಿ ನಷ್ಟವಾಗಿದ್ದು, ನೆರೆ ಪೀಡಿತ ಪ್ರದೇಶಗಳ ನಷ್ಟದ ಲೆಕ್ಕಾಚಾರ ಇನ್ನಷ್ಟೇ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ. ಇದನ್ನೂ ಓದಿ: ಆಫರ್ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ
Advertisement
Advertisement
ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರಿದಿದ್ದು, ನಷ್ಟದ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.