ಬೆಂಗ್ಳೂರಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ- ಟ್ರಾಫಿಕ್‍ನಲ್ಲಿ ಸಿಕ್ಕಿ ಸುಸ್ತಾದ ಪ್ರಯಾಣಿಕರು

Public TV
0 Min Read
rain 2 1

ಬೆಂಗಳೂರು: ನಗರದಲ್ಲೆಡೆ ವರುಣ ದೇವ ತನ್ನ ಆರ್ಭಟ ಮುಂದುವರೆಸಿದ್ದಾನೆ. ಭಾರೀ ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಾಫಿಕ್‍ನಲ್ಲಿ ಪ್ರಯಾಣಿಕರು ಸಿಲುಕಿ ಸುಸ್ತಾಗಿದ್ದಾರೆ.

rain 6 1

ನಗರದ ಚಾಮರಾಜಪೇಟೆ, ಬಸವನಗುಡಿ, ಬನಶಂಕರಿ, ಯಶವಂತಪುರ, ಮಲ್ಲೇಶ್ವರ, ಹೆಬ್ಬಾಳ, ಸೇರಿದಂತೆ ಹಲವೆಡೆ ಗಾಳಿ ಸಹಿತ ಮಳೆಯಾಗುತ್ತಿದೆ. ಶಿವಾನಂದ ಸರ್ಕಲ್ ಬಳಿಯ ಅಂಡರ್ ಪಾಸ್‍ನಲ್ಲಿ ಕಾರೊಂದು ಮುಳುಗಡೆಯಾಗಿದೆ.

rain 5 1

ರಾಜಾಜಿನಗರ ಮತ್ತು ಹೊಸಕೆರೆಹಳ್ಳಿಯ ತಗ್ಗು ಪ್ರದೇಶಗಳಿಗೆ ನೀರು ನುಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಬೆಂಗಳೂರುಬ ಹೊರವಲಯ ನೆಲಮಂಗಲ ಬಳಿಯೂ ಗಾಳಿ ಸಹಿತ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ನೆಲಮಂಗಲ ತಾಲೂಕಿನಾದ್ಯಂತ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

rain 1 3

rain 7 1

rain 4 2

rain 3 2

 

Share This Article
Leave a Comment

Leave a Reply

Your email address will not be published. Required fields are marked *