ಯಾದಗಿರಿ: ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Rain) ಜಿಲ್ಲೆಯ ಶಹಾಪುರದ ಕೊಳ್ಳುರು(ಎಂ) ಹಾಗೂ ಮರಕಲ್ ಗ್ರಾಮದ ಮಧ್ಯೆ ಪ್ರಗತಿಯಲ್ಲಿದ್ದ ಸೇತುವೆ ನಡುವಿನ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ಶಾಲೆಗೆ (School) ತೆರಳಿದ್ದ ಮಕ್ಕಳು ವಾಪಾಸ್ ಆಗುವ ವೇಳೆ ಪರದಾಡಿದ ಘಟನೆ ನಡೆದಿದೆ.
ಕೊಳ್ಳುರು(ಎಂ) ಹಾಗೂ ಮರಕಲ್ ಗ್ರಾಮದ ಮಧ್ಯದಲ್ಲಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಈ ಎರಡೂ ಗ್ರಾಮಕ್ಕೆ ಸಂಚರಿಸಲು ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋಗಿದೆ. ಇದರಿಂದ ಶಾಲೆಗೆ ತೆರಳಿದ್ದ ಮರಕಲ್ ಗ್ರಾಮದ ವಿದ್ಯಾರ್ಥಿಗಳು (Students) ಪರದಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರ – ಸುಪ್ರೀಂ ಕೋರ್ಟ್‍ಗೆ ರೈತ ಸಂಘ ಅರ್ಜಿ
Advertisement
Advertisement
ಬಳಿಕ ಪಾಲಕರು ಏಣಿಯನ್ನು ತಂದು ನಿರ್ಮಾಣ ಹಂತದ ಸೇತುವೆ ಮೇಲಿಂದ ಮಕ್ಕಳನ್ನು ಕೆಳಗಿಳಿಸಿ ಕರೆದುಕೊಂಡು ಹೋಗಿದ್ದಾರೆ. ಸೇತುವೆ ನಿರ್ಮಾಣ ಕಾಮಗಾರಿ ಹಲವಾರು ತಿಂಗಳುಗಳಿಂದ ನಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿಲ್ಲ. ನಮ್ಮ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಸ್ಥಳೀಯ ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ – ಉದ್ದೇಶ ಒಳ್ಳೆಯದಿದ್ದರೆ ಬೆಂಬಲ ಎಂದ ಪ್ರಶಾಂತ್ ಕಿಶೋರ್
Advertisement
Web Stories