ಬಿರುಗಾಳಿ ಸಹಿತ ಮಳೆಗೆ ಹಾರಿ ಬಿದ್ದ ಟಿನ್‍ಗಳು – ಮನೆ, ವಾಹನ ಜಖಂ

Public TV
1 Min Read
RCR

ರಾಯಚೂರು: ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಸಹಿತ ಜೋರು ಮಳೆಗೆ ಟಿನ್‍ಗಳು ಹಾರಿ ಬಿದ್ದ ಪರಿಣಾಮ ಮನೆ, ವಾಹನಗಳು ಜಖಂ ಆಗಿವೆ.

ಶುಕ್ರವಾರ ರಾತ್ರಿ ವೇಳೆ ಗಾಳಿಯ ರಭಸಕ್ಕೆ ಹಾರಿ ಬಂದ ಟಿನ್‍ಗಳು ನಗರದ ಸಿಯತಲಾಬ್ ನಿವಾಸಿ ರತ್ನಾಬಾಯಿ ಮನೆ ಮೇಲೆ ಬಿದ್ದಿವೆ. ರಸ್ತೆ, ಮನೆಗಳ ಮೇಲೆ ಬಿದ್ದಿರುವ ಟಿನ್ ಗಳಿಂದ ತಳ್ಳೋ ಬಂಡಿ, ಬೈಕ್‍ಗಳು ಜಖಂಗೊಂಡಿವೆ.

4b49bcec 6ea0 4eb5 9bc8 d6b61a4262e4

ಅಷ್ಟೇ ಅಲ್ಲದೇ ರಾತ್ರಿ ಮಳೆ ಜೋರಾಗಿದ್ದರಿಂದ ನಿವಾಸಿಗಳು ಮನೆಯಿಂದ ಹೊರಗಡೆಯಿರಲಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿನ ಪಾಳುಬಿದ್ದ ಫ್ಯಾಕ್ಟರಿಯೊಂದರ ಟಿನ್‍ಗಳು ಗಾಳಿಗೆ ಹಾರಿ ಮನೆಗಳ ಮೇಲೆ ಬಿದ್ದಿವೆ.

ತೆಂಗಿನಮರ ಟಿನ್‍ಗಳನ್ನ ತಡೆದಿರುವ ಹಿನ್ನೆಲೆಯಲ್ಲಿ ಹೆಚ್ಚು ಅಪಾಯವಾಗಿಲ್ಲ. ರತ್ನಬಾಯಿ ಮನೆ ಬಿರುಕುಬಿಟ್ಟಿದೆ. ಇನ್ನೂ ಮಳೆಯಿಂದ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.  ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *