ರಾಜ್ಯದ ಹಲವೆಡೆ ಪ್ರವಾಹ- ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

Public TV
1 Min Read
rain kodgau

ಬೆಂಗಳೂರು: ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಮತ್ತದವರ ಅವಾಂತರ ಮುಂದುವರಿದಿದೆ. ಕೊಡಗಿನಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು, ಮರಗಳು-ವಿದ್ಯುತ್ ಕಂಬಗಳು ಧರೆಗುರುಳಿವೆ.

ಮನೆ, ಕಟ್ಟಡಗಳ ಗೋಡೆ ಕುಸಿದಿವೆ. ಮೇಲ್ಛಾವಣಿ ಹಾರಿ ಹೋಗಿವೆ. ಹಳ್ಳ-ಕೊಳ್ಳ, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ತಲಕಾವೇರಿ-ಭಾಗಮಂಡಲ ರಸ್ತೆ ನೀರಿನಲ್ಲಿ ಮುಳುಗಿವೆ.

ಕೇರಳದಲ್ಲಿ ವೈನಾಡಿನಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಇದರಿಂದ ಕಪಿಲೆ ತುಂಬಿ ಹರಿಯುತಿದ್ದು, ನಂಜನಗೂಡಿನ ಸ್ನಾನಘಟ್ಟಗಳು ಮುಳುಗಿವೆ. ಕೆಆರ್‍ಎಸ್ ಭರ್ತಿಗೆ ಇನ್ನು 15 ಅಡಿ ಬಾಕಿಯಿದೆ.

ಚಿಕ್ಕಮಗಳೂರಿನಲ್ಲಿ ಭದ್ರಾನದಿ ತುಂಬಿರೋ ಕಾರಣ ಮೂಡಿಗೆರೆಯ ಹೊಳೆಕುಡಿ ಗ್ರಾಮದ ಕುಟುಂಬಗಳ ಬದುಕು ಅತಂತ್ರವಾಗಿದೆ. ಉತ್ತರ ಕನ್ನಡದ ಎಲ್ಲಾ ತಾಲೂಕುಗಳಲ್ಲಿ ದಾಖಲೆ ಮಳೆಯಾಗ್ತಿದೆ. ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ ಕೊಂಚ ತಣ್ಣಗಾಗಿದೆ. ಆದ್ರೆ, ಮಳೆ ನಡುವೆಯೂ ದಕ್ಷಿಣ ಕನ್ನಡ ಮತ್ತು ಮಡಿಕೇರಿಯ ಹಲವೆಡೆ ಮೂರು ಸಲ ಭೂಮಿ ಲಘುವಾಗಿ ಕಂಪಿಸಿದ ಅನುಭವವಾಗಿದೆ.

ರಾಮನಗರದಲ್ಲೂ ಜೋರು ಮಳೆಯಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ, ತುಂತುರು ಮಳೆಯಾಗಿದೆ.

Share This Article