ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಬಿಎನ್ ಆಸ್ಪತ್ರೆಯಲ್ಲಿ ಮೊಣಕಾಲುವರೆಗೆ ನೀರು ನಿಂತಿರುವ ಘಟನೆ ನಡೆದಿದೆ.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನೀರು ಆಸ್ಪತ್ರೆಗೆ ನುಗ್ಗಿ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಕೊಠಡಿಗಳಲ್ಲೆಲ್ಲಾ ನೀರು ನಿಂತಿದ್ದರಿಂದ ರೋಗಿಗಳು ಬೇರೆ ಕಡೆ ಹೋಗಿ ರಾತ್ರಿ ಕಳೆದಿದ್ದಾರೆ. ಬಳಿಕ ಇಂದು ಬೆಳಗ್ಗೆ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಬೇರಡೆ ಶಿಪ್ಟ್ ಮಾಡಿದ್ದಾರೆ.
Advertisement
ಮಳೆ ಬಂದಾಗೊಮ್ಮೆ ಇದೇ ರೀತಿ ಆಗುತ್ತದೆ. ಆದರೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಅಲ್ಲಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮಳೆಯಿಂದ ಸಿಡಿಲು ಬಡಿದು ಸೇಡಂ ತಾಲೂಕಿನ ರಾಮಪ್ಪ ಮತ್ತು ಆಳಂದ ತಾಲೂಕಿನ ಹಳ್ಳೆಪ್ಪಾ ಎಂಬ ಇಬ್ಬರು ವ್ಯಕ್ತಿಗಳು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.